ಪುತ್ತೂರು ಕೊಂಬೆಟ್ಟು ಬಳಿ ಹೋಟೆಲ್ ನಡೆಸುತ್ತಿದ್ದ 36ರ ಶಕುಂತಲಾ ಎಂಬವರನ್ನು ನೇರಳಕಟ್ಟೆ ರಸ್ತೆಯಲ್ಲಿ ಹಾಡು ಹಗಲೇ ಇರಿದು ಕೊಂದಿದ್ದಾನೆ.
ಆರೋಪಿ ಎಮನಾಜೆಯ ಶ್ರೀಧರ್ ರಿಕ್ಷಾ ಚಾಲಕ. ಆತನ ರಿಕ್ಷಾದಲ್ಲೇ ಹೋಟೆಲ್ ಸಾಮಗ್ರಿ ತರಲಾಗುತ್ತಿತ್ತು. ಸಣ್ಣ ಜಗಳಕ್ಕೆ ಅದನ್ನು ನಿಲ್ಲಿಸಲಾಗಿದೆ. ನೆಟ್ಲಮುಡ್ನೂರು ಸಂಜೀವರ ಪತ್ನಿ ಶಕುಂತಲಾ ತನ್ನ ದ್ವಿಚಕ್ರ ವಾಹನದಲ್ಲಿ ಮಧ್ಯಾಹ್ನ ಹೋಟೆಲಿಗೆ ಹೋಗುವಾಗ ರಿಕ್ಷಾದಲ್ಲಿ ಬಂದ ಆರೋಪಿ ಕಂಡಕಂಡಲ್ಲಿ ಇರಿದು ಪರಾರಿಯಾಗಿದ್ದಾನೆ. ನೋಡುಗರ ಮೊಬಾಯಿಲ್‌ಗೆ ರಿಕ್ಷಾ ನಂಬರ್ ಸಿಕ್ಕಿದ್ದರಿಂದ ಆರೋಪಿ ಸುಲಭವಾಗಿ ಪೋಲೀಸರಿಗೆ ಸಿಕ್ಕಿ ಬಿದ್ದ.