ಜಾಗತಿಕವಾಗಿ ರೂಪಾಂತರಿ ಕೊರೋನಾ ಕಾಟ ಮುಂದುವರಿದಿದೆ. ಶನಿವಾರ 13 ಲಕ್ಷದಷ್ಟು ಜನ ಹೊಸದಾಗಿ ಲೋಕದಲ್ಲಿ ಸೋಂಕು ಭಾಜನರಾದರೆ, 4 ಸಾವಿರದಷ್ಟು ಜನರು ಸಾಂಕ್ರಾಮಿಕಕ್ಕೆ ಬಲಿಯಾದರು. ಎಲ್ಲವೂ ಸೇರಿ ಒಟ್ಟು ಸೋಂಕಿತರ ಸಂಖ್ಯೆಯು ಈಗ 48,12,37,186 ದಾಟಿತು. ಹಾಗೆಯೇ ಕೊರೋನಾ ಮರಣ ಕಂಡವರ ಸಂಖ್ಯೆಯು 61,45,981 ಮುಟ್ಟಿತು.
ಭಾರತ ಕೊರೋನಾ, ಇಳಿಕೆಯ ಹಾದಿಯಲ್ಲಿ ಶನಿವಾರ ದಿನ 1,660 ನಮ್ಮ ಜನ ಕೊರೋನಾ ಸೋಂಕಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆಯು ಈಗ 4,30,19,270 ತಲುಪಿದೆ. ನಿನ್ನೆ ದಿನ ನಮ್ಮ ಜನ 149 ಮಂದಿ ಕೊರೋನಾ ಸಾವು ಹೊಂದಿದ್ದಾರೆ. ಅಲ್ಲಿಗೆ ಕೊರೋನಾವು ಬಲಿ ಪಡೆದವರ ಒಟ್ಟು ಸಂಖ್ಯೆಯು 5,21,034 ಆಯಿತು.
ಶನಿವಾರ ಕರ್ನಾಟಕದಲ್ಲಿ 79 ಮಂದಿ ಹೊಸದಾಗಿ ನಾವೆಲ್ ಕೋವಿಡ್ 19 ಪಾಸಿಟಿವ್ ಎನಿಸಿದರು. ಈಗ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆಯು 39,45,247 ಮುಟ್ಟಿದೆ. ನಿನ್ನೆ ದಿನ ರಾಜ್ಯದಲ್ಲಿ ಒಬ್ಬರನ್ನು ಕೋವಿಡ್ ಬಲಿ ಪಡೆದಿದೆ. ರಾಜ್ಯದಲ್ಲಿ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆ ಈಗ 40,049.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ದೂರ ಆಗಿದೆ. ಶನಿವಾರ ದ. ಕ.ದಲ್ಲಿ ಪಾಸಿಟಿವ್ ವರದಿಯಾಗಿಲ್ಲ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಬಂದವರ ಸಂಖ್ಯೆ 1,35,480ರಲ್ಲೇ ಇದೆ. ನಿನ್ನೆ ಜಿಲ್ಲೆಯಲ್ಲಿ ಸಾವು ಸಹ ಆಗಿಲ್ಲ. ಒಟ್ಟು ಸಾವು ಸಂಖ್ಯೆ 1,850ರಲ್ಲಿ ಇದೆ. ಸತತ 2ನೇ ಜಿಲ್ಲೆ ಸೊನ್ನೆ ಸಾಧನೆಯಲ್ಲಿದೆ. ಸದ್ಯ 9 ಜನ ಮಾತ್ರ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿಯಲ್ಲಿ ನಿನ್ನೆ ಸಾವು ಸಂಭವಿಸಿಲ್ಲ. ಒಟ್ಟು ಸಾವು ಸಂಖ್ಯೆ 546ರಲ್ಲೇ ಇದೆ. ಶನಿವಾರ ಸೋಂಕಿಗೆ ಈಡಾದವರ ಸಂಖ್ಯೆ 2. ಒಟ್ಟು ಮೊತ್ತ ಸೋಂಕಿತರ ಸಂಖ್ಯೆಯು ಈಗ 95,603 ಆಯಿತು.