ಮಂಗಳೂರು, ಮಾರ್ಚ್ 27: ಉರ್ವ ಸ್ಟೋರ್ ನಲ್ಲಿರುವ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಭಾಂಗಣದಲ್ಲಿ ಮನಸು ಮಾಗಿದ ಸುಸ್ವರ ಎಂಬ ಕನ್ನಡ ಮೌಲಿಕ ಚಿತ್ರ ಗೀತೆಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಯಶಸ್ವಿಯಾಗಿ ನಡೆಯಿತು.
ಆಕಾಶವಾಣಿ ಸಿತಾರ್ ವಾದಕರಾದ ಉಸ್ತಾದ್ ರಫೀಕ್ ಖಾನ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕಲೇವಾಸಂ ಅಧ್ಯಕ್ಷೆಯಾದ ಡಾ. ಜ್ಯೋತಿ ಚೇಳ್ಯಾರು, ಪುಸ್ತಕದ ಲೇಖಕಿಯಾದ ಜ್ಯೋತಿ ಗುರುಪ್ರಸಾದ್, ಸಭೆಯ ಅಧ್ಯಕ್ಷತೆ ವಹಿಸಿದ್ದ ಎ. ಪಿ. ಮಾಲತಿ, ಸೃಷ್ಟಿ ನಾಗೇಶ್, ವಿಜಯಲಕ್ಷ್ಮಿ, ವಾಣಿಶ್ರೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿತ್ರಗೀತೆಗಳಲ್ಲಿ ಸಾಮಾಜಿಕ ಮೌಲ್ಯಗಳು ಮತ್ತು ಪ್ರೇಮದ ಪರಿಕಲ್ಪನೆ ಗೋಷ್ಠಿಯಲ್ಲಿ ಮುದ್ದು ಮೂಡುಬೆಳ್ಳೆ, ಲತಾ ಆರ್. ಕೋಟ್ಯಾನ್, ಶುಭಾ ಮರವಂತೆ ಮೊದಲಾದವರು ಇದರಲ್ಲಿ ಮಾತನಾಡಿದರು.