ಮಂಗಳೂರು, ಜೂನ್ 27: ಪ್ರೌಢಶಾಲಾ  ಸಮಯದಲ್ಲಿ ವಿದ್ಯಾರ್ಥಿಗಳಿಗೆ  ಒಳ್ಳೆಯ ಮುಖಂಡರು ಹಾಗೂ ದೇಶದ ಪ್ರಜೆಗಳಾಗಲು ತರಭೇತಿ ನೀಡುವ ‌ಪೃಕ್ರೀಯೆಯು ಮೊಗ್ಗುಗಳು ಇರುವಾಗಲೇ ಒಳ್ಳೆಯ ಪೋಷಕಾಂಶಗಳು ನೀಡುವ ಮೂಲಕ ಒಳ್ಳೆಯ ಹೂಗಳು ಆಗುವಂತೆ ನೋಡುವುದು ಎಂದು ಜೇಸಿ ವಲಯ ಹದಿನೈದರ ವಲಯದ ಹಿರಿಯ ತರಬೇತುದಾರ ಜೇಸಿ ರೇಮಂಡ್ ಡಿಕೂನಾ ತಾಕೊಡೆ ಹೇಳಿದರು.

ಅವರು ಡಿಜೆ ಜೈನ ವಿದ್ಯಾಲಯದ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ನಾಲ್ಕು ದಿನಗಳ ಯೂತ್ ಎಂಪಾವರ್ ಮೆಂಟ್  ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪೂರ್ವ ಅದ್ಯಕ್ಷ ಜೇಸಿ ಸಂತೋಷ್ ಕುಮಾರ್ ಶುಭಾಶಯ ಹಾರೈಸಿದರು.

ಖಜಾಂಚಿ ಜೇಸಿ ಹಮೀದ್ ಇದ್ದರು.

ತರಭೇತಿ ನಿರ್ದೇಶಕರಾದ ವರ್ಷ ‌ಕಾಮತ್ ಜೇಸಿ ವಾಣಿಯನ್ನು ಹೇಳಿದರು. ಕಾರ್ಯದರ್ಶಿ ಸುನಿಲ್ ‌ಕುಮಾರ್ ವಂದಿಸಿದರು.

ಹಿರಿಯ ಜೇಸಿ ವಿನಯಚಂದ್ರ ಅವರು‌ ಮುಂದಿನ ತರಭೇತಿ ಪರಿಣಾಮಕಾರಿ ಭಾಷಣ ಕಲೆಯನ್ನು ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಶಾಂತಲಾ ಆಚಾರ್ಯ ವಹಿಸಿ ಸ್ವಾಗತಿಸಿದರು.