ಜೈನ ಕಾಶಿ ಮೂಡುಬಿದಿರೆಗೆ ಇಂದು ಬೆಳಗ್ಗೆ 9.30ಕ್ಕೆ ಆರು ಪಪೂ ಮुनಿವರ್ಯರು ಹಾಗೂ ಸಂಜೆ 5.15ಕ್ಕೆ ನಾಲ್ಕು ಮುನಿವರ್ಯರು ಪುರಪ್ರವೇಶ ನಡೆಸಿದರು. ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಸ್ಥಳೀಯ ಜೈನ ಭಾಂಧವರು ಶ್ರದ್ಧಾ–ಭಕ್ತಿ ಪೂರ್ವಕವಾಗಿ ಸ್ವಾಗತಿಸಿ ಶ್ರೀ ಜೈನ ಮಠಕ್ಕೆ ಬರಮಾಡಿಕೊಂಡರು.


ಸಂಜೆ 5.45ಕ್ಕೆ ಸಾವಿರ ಕಂಬ ಬಸದಿಯಲ್ಲಿ ಜಲಾಭಿಷೇಕ, ಆಚಾರ್ಯಸಂಘದ ಪಾದಪೂಜೆ, ಮಹಾ ಮಂಗಳಾರತಿ ಹಾಗೂ ಜಗತ್ಪಾಲ ಇಂದ್ರರ ಪೂಜೆ 23-11-2025 ಭಾನುವಾರ ಚೆನ್ನಾಬೈರಾ ದೇವಿ ಮಂಟಪದಲ್ಲಿ ನೆರವೇರಿತು. ನಂತರ ಆಚಾರ್ಯರು ಮತ್ತು ಮುನಿವರ್ಯರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಆಶೀರ್ವಾದ ನೀಡಿದರು.
ಛೋಟೆ ಆಚಾರ್ಯ 108 ವಿದ್ಯಾಸಾಗರ್ ಮುನಿ ಮಹಾರಾಜರು ಮಾತನಾಡಿ, “ಮೂಡುಬಿದಿರೆಯ ಜೈನ ಕೇಂದ್ರದಲ್ಲಿರುವ ಬಸದಿ ಮತ್ತು ಜಿನಬಿಂಬಗಳು ಜಗತ್ತಿನಲ್ಲೇ ಶ್ರೇಷ್ಠ ತೀರ್ಥಕ್ಷೇತ್ರಗಳಲ್ಲೊಂದು ಎಂಬ ಸ್ಥಾನಮಾನ ಪಡೆದುಕೊಂಡಿವೆ. ಕ್ಷೇತ್ರದ ಅಭಿವೃದ್ಧಿಗಾಗಿ ಭಟ್ಟಾರಕರು ಶ್ರಮಿಸುತ್ತಿದ್ದಾರೆ; ನೀವು ಎಲ್ಲರೂ ಸಹಕಾರ ನೀಡಬೇಕು,” ಎಂದು ಹೇಳಿದರು.
ಅವರು ಮುಂದುವರಿಸಿ, “ಶಾಸ್ತ್ರಪೂಜೆಯಿಂದ ಮಾತ್ರ ಕರ್ಮನಾಶವಾಗುವುದಿಲ್ಲ. ನದಿಸ್ನಾನದಿಂದ ದೇಹದ ಮಲಿನತೆ ದೂರವಾಗಿದರೂ ಆತ್ಮಕ್ಕೆ ಅಂಟಿದ ಮಲಿನತೆ ಶಾಸ್ತ್ರಸ್ವಾಧ್ಯಾಯ ಮತ್ತು ಅನುಷ್ಠಾನದಿಂದ ಮಾತ್ರ ನಿವಾರಣೆ ಮಾಡಬಹುದು. ಎಲ್ಲರೂ ವಿವೇಕವಂತರಾಗಿ ಕರ್ಮನಾಶ ಮಾಡಿ ಪೂಜ್ಯರಾಗೋಣ,” ಎಂದು ಉಪದೇಶಿಸಿದರು.
ಮುಕ್ತೇಸರಾ ಪಟ್ಣ ಶೆಟ್ಟಿ, ಸುದೇಶ್ ಕುಮಾರ್, ಆದರ್ಶ್, ಶಂಭವ್ ಕುಮಾರ್, ಬಾಹುಬಲಿ ಪ್ರಸಾದ್, ಶೈಲೇಂದ್ರ, ಅನಂತ್ ವೀರ, ಶ್ವೇತಾ ಜೈನ್, ಮಂಜುಳಾ ಅಭಯಚಂದ್ರ, ವೃಂದಾ ರಾಜೇಂದ್ರ, ಸುದೇಶ್ ಕುಮಾರ್ ಎ., ಸಂಜಯಂತ್ ಕುಮಾರ್ ಸೇರಿದಂತೆ ಸ್ಥಳೀಯ ವಿವಿಧ ಜೈನ ಸಂಘಟನೆಗಳ ಪ್ರಮುಖರು ನೂರಾರು ಭಕ್ತರೊಂದಿಗೆ ಪಾದಯಾತ್ರೆ–ವಿಹಾರದಲ್ಲಿ ಭಾಗವಹಿಸಿ ಪುಣ್ಯಲಾಭ ಪಡೆದರು.
ಆಗಮಿಸಿದ ಮುನಿ ಸಂಘದ ಪರಿಚಯ
🔷 ಸನ್ಮತಿ ಸಾಗರ್ ಮಹಾರಾಜ್ ಅವರ ಶಿಷ್ಯರು:
1️⃣ ಶಾಂತಮೂರ್ತಿ ಆಚಾರ್ಯ ಶ್ರೀ 108 ವಾಸಲ್ಯ ರತ್ನಾಕರ (ದಕ್ಷ ಆಗಮ ಚಕ್ರವರ್ತಿ)
ನಿರ್ಯಾಪಕ ಶ್ರಮಣ ಮುನಿ ಶ್ರೀ 108 ಛೋಟೆ ವಾಲಾ ವಿದ್ಯಾಸಾಗರ್ ಮಹಾರಾಜ್
2️⃣ ನಿರ್ಯಾಪಕ ಮುನಿ ಶ್ರೀ 108 ಸಿದ್ಧಾಂಥ ಸಾಗರ್ ಜೀ ಮಹಾರಾಜ್
3️⃣ ಮುನಿ ಶ್ರೀ 108 ಪ್ರಶಾಂತ್ ಸಾಗರ್ ಜೀ ಮಹಾರಾಜ್
4️⃣ ಮುನಿ ಶ್ರೀ 108 ಅವಿಛಲ್ ಸಾಗರ್ ಜೀ ಮಹಾರಾಜ್
5️⃣ ಮುನಿ ಶ್ರೀ 108 ಶಾಶ್ವತ್ ಸಾಗರ್ ಜೀ ಮಹಾರಾಜ್
6️⃣ ಮುನಿ ಶ್ರೀ 108 ಅಧ್ಯಾತ್ಮ ಸಾಗರ್ ಜೀ ಮಹಾರಾಜ್
7️⃣ ಮುನಿ ಶ್ರೀ 108 ಆಗಮ್ ಸಾಗರ್ ಜೀ ಮಹಾರಾಜ್
8️⃣ ಮುನಿ ಶ್ರೀ 108 ವಿರಾಟ್ ಸಾಗರ್ ಜೀ ಮಹಾರಾಜ್
9️⃣ ಮುನಿ ಶ್ರೀ 108 ನೇಮಿ ಸಾಗರ್ ಜೀ ಮಹಾರಾಜ್
🔟 ಮುನಿ ಶ್ರೀ 108 ಆನೇಕಾಂತ ಸಾಗರ್ ಮಹಾರಾಜ್