ಸಿದ್ದಕಟ್ಟೆ: ಗುಣಶ್ರೀ ವಿದ್ಯಾದೇಗುಳದ 9ನೇ ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಕ್ಟೋಬರ್ 10, 2025 ರಂದು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದರು. ರಾತ್ರಿ 11 ಗಂಟೆಗೆ ಸಂಸ್ಥೆಯಿಂದ ಪಯಣ ಆರಂಭಗೊಂಡಿದ್ದು, ಅಕ್ಟೋಬರ್ 11ರ ಮುಂಜಾನೆ 6 ಗಂಟೆಗೆ ತಂಡ ಮೈಸೂರು ತಲುಪಿದ ತಂಡವು ಉಪಹಾರವಾದ ನಂತರ ಸಂತ ಪಿಲೋಮಿನ ಚರ್ಚ್‌ಗೆ ಭೇಟಿ ನೀಡಿತು. ಬಳಿಕ ಬೆಂಗಳೂರು ಕಡೆಗೆ ಹೊರಟು, ವಂಡರ್‌ಲಾ ತಲುಪಿದರು. ವಿದ್ಯಾರ್ಥಿಗಳು ದಿನವಿಡೀ ಅಲ್ಲಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.



ಸಂಜೆ 6 ಗಂಟೆಗೆ ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸಿ, ರಾತ್ರಿ ಊಟದ ನಂತರ ಮೈಸೂರಿನಲ್ಲಿ ವಾಸ್ತವ್ಯವಿದ್ದು, ಮರುದಿನ ಬೆಳಿಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಾಯಿತು. ನಂತರ ಮೈಸೂರು ಮೃಗಾಲಯ, ಮೈಸೂರು ಅರಮನೆ ವೀಕ್ಷಣೆ, ಮಧ್ಯಾಹ್ನದ ಊಟ, ಪಯಣ ಮ್ಯೂಸಿಯಂ ಭೇಟಿ ಮತ್ತು ನಂತರ ಕೆಆರ್‌ಎಸ್ ಅಣೆಕಟ್ಟು ವೀಕ್ಷಣೆ ನೆರವೇರಿಸಲಾಯಿತು.
ರಾತ್ರಿ ಊಟದ ನಂತರ ಬಂಟ್ವಾಳದ ಕಡೆಗೆ ಪ್ರಯಾಣ ಮುಂದುವರಿಸಿಕೊಂಡು, 13/10/2025 ರ ಬೆಳಿಗ್ಗೆ 6 ಗಂಟೆಗೆ ಗುಣಶ್ರೀ ವಿದ್ಯಾದೇಗುಳಕ್ಕೆ ವಾಪಸ್ಸಾಯಿತು.
ಈ ಪ್ರವಾಸ ಯಶಸ್ವಿಯಾಗಲು ಸಹಕರಿಸಿದ ಸಂಚಾಲಕ ವಿಜಯ ಚೌಟ, ಪ್ರಾಂಶುಪಾಲೆ ರಮ್ಯಾ, ಮುಖ್ಯೋಪಾಧ್ಯಾಯಿನಿ ಜಯಶ್ರೀ ಮತ್ತು ಪ್ರವಾಸ ಗೈಡ್ ಕೀರ್ತನ್ ಇವರಿಗೆ ಧನ್ಯವಾದಗಳು ತಿಳಿಸಲಾಯಿತು.