ಮೂಡುಬಿದಿರೆ: ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಗದಗ, ಕೆ.ಹೆಚ್ ಪಾಟೇಲ್ ಜಿಲ್ಲಾ ಕ್ರೀಡಾಂಗಣ ಕೆಸಿ ರಾಣಿ ರಸ್ತೆ ಗದಗ, ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ 14 ವರ್ಷ ಮತ್ತು 17 ವರ್ಷ  ವಯೋಮಿತಿಯ ಪ್ರಾಥಮಿಕ, ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಮಲ್ಲಕಂಬ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಮಲ್ಲಕಂಬ ತಂಡವು 14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮತ್ತು 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಮತ್ತು 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮತ್ತು 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.  

ಮುಂದಿನ ತಿಂಗಳು ನಡೆಯುವ ರಾಷ್ಟ್ರೀಯ ಮಲ್ಲಕಂಬ ಸ್ಪರ್ಧೆಗೆ ಆಳ್ವಾಸ್ ಶಾಲೆಯಿಂದ ಒಟ್ಟು 09 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಫಲಿತಾಂಶ:

14 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ: ಗೌರೀಶ್ ಎಂ ಕೆ - ದ್ವಿತೀಯ ಸ್ಥಾನ, ಭೀಮಪ್ಪ ಎಂ ಜಿ ತೃತೀಯ ಸ್ಥಾನ, ಪ್ರೀತಮ್ ಜಿ - ನಾಲ್ಕನೇ ಸ್ಥಾನ

14 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ: ವರ್ಷಿಣಿ ಎಂ ಕೆ ನಾಲ್ಕನೇ ಸ್ಥಾನ

17 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ: ಪ್ರಜ್ವಲ್ ಎಂ ಐ  ದ್ವಿತೀಯ ಸ್ಥಾನ, ಸಾಬು ಬಿ ಎಂ - ತೃತೀಯ ಸ್ಥಾನ, ಗಜಾನಂದ್ ಎಚ್ ಸಿ - ನಾಲ್ಕನೇ ಸ್ಥಾನ

17 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ: ದಿವ್ಯಾ ಜೆ ಪಿ ತೃತೀಯ ಸ್ಥಾನ, ಪೂಜಾ ವಿ - ನಾಲ್ಕನೇ ಸ್ಥಾನ

ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರವರು ಅಭಿನಂದನೆ ಸಲ್ಲಿಸಿದ್ದಾರೆ.