ಮಂಗಳೂರು,ಜೂ.25; ನಗರದ  ಗಾಂಧಿನಗ ರ ಶಾಲಾ ಆವರಣ,ಪತ್ರಿಕಾ ಭವನದ ಆವರಣದಲ್ಲಿ ದ.ಕ ಜಿಲ್ಲಾ ಕಾರ್ಯ ನಿರತ  ಪತ್ರ ಕರ್ತರ ಸಂಘ ಅರಣ್ಯ ಇಲಾಖೆ ಮತ್ತು ಕೆಐಒಸಿಎಲ್  ಸಹಯೋಗದೊಂದಿಗೆ ಹಸಿರೇ ಉಸಿರು ಕಾರ್ಯಕ್ರಮದ ಮೂಲಕ  ಇಂದು ಹಣ್ಣಿನ ಗಿಡ ನೆಡಲಾಯಿತು.

ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಶಾಸಕ ವೇದವ್ಯಾಸ ಕಾಮತ್ ಮಾತನಾಡುತ್ತಾ, ಮನಪಾ ಪತ್ರಿಕಾ ಭವನ ಗಾಂಧಿ ನಗರ ಪರಿಸರದಲ್ಲಿ ಹಣ್ಣಿನ ಗಿಡಗಳನ್ನೊಳ ಗೊಂಡ  ಸಾಲು ಮರಗಳ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಶಾಸಕ ಡಾ.ಭರತ್ ಶೆಟ್ಟಿ ಮಾತನಾಡುತ್ತಾ ಪತ್ರಕರ್ತರ  ಸಂಘದ ಮೂಲಕ ಪರಿಸರ ಸಂರಕ್ಷಣೆ ಯ ಕಾರ್ಯ ದಲ್ಲಿ ಸರಕಾರದ ಜೊತೆ ಕೈ ಜೋಡಿಸುತ್ತಿರುವುದು ಶ್ಲಾಘ ನೀಯ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಅತಿಥಿ ಯಾಗಿ ಭಾಗವಹಿಸಿ ದ ಕೆಐಒಸಿಎಲ್ ನ ಹಿರಿಯ ಮಹಾ ಪ್ರಬಂಧ ಕ ರಾಮಕೃಷ್ಣ ಮಾತನಾಡುತ್ತಾ,ಅರಣ್ಯ ಇಲಾಖೆ ಮತ್ತು ಪತ್ರಕರ್ತರ ಸಂಘದ ಸಹಕಾದೊಂದಿಗೆ  ಮೂರು ಕಡೆ ಮಿಯಾವಾಕಿ ಅರಣ್ಯ  ನಿರ್ಮಿಸಲು ಕೆಐಒಸಿಎಲ್ ವತಿಯಿಂದ 15ಲಕ್ಷ ರೂ ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ.

ಮನಪಾ ಸದಸ್ಯೆ ಸಂಧ್ಯಾ ಆಚಾರ್, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಸಹಾಯ ಅರಣ್ಯ ಸಂರಕ್ಷಣಾ ಧಿಕಾರಿ ಸುಬ್ರಹ್ಮಣ್ಯ ರಾವ್ ,ವಲಯ  ಅರಣ್ಯಾಧಿಕಾ ರಿ ಪ್ರಶಾಂತ್ ಪೈ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಸ್ವರ್ಣ ಸುಂದರ್ ,ಪರಿಸರ ಕಾರ್ಯ ಕರ್ತ ಸಂದೇಶ್,ಮಾಜಿ ಮೇಯರ್ ಪುರಂದರ ದಾಸ್ ಕೂಳೂರು, ದ.ಕ. ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಅಧ್ಯಕ್ಷ ತೆ ವಹಿಸಿದ್ದರು. ಕೆಐಒಸಿಎಲ್ ನ ಹಿರಿಯ ಪ್ರಬಂಧಕ  ಮುರುಗೇಶ್ ,ಗಾಂಧಿ ನಗರದ ಉನ್ನತೀಕ ರಿಸಿದ  ಪ್ರಾಥಮಿಕ ಶಾಲಾ ಮುಖ್ಯೋಪಾ ಧ್ಯಾಯರಾದ  ಯಶೋಧ .ಬಿ ಮತ್ತು ದ.ಕ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿ ದ್ದರು.ದ.ಕ ಜಿಲ್ಲಾ ಕಾರ್ಯ ನಿರತ  ಪತ್ರಕರ್ತ ರ  ಸಂಘದ ಪ್ರಧಾನ ಕಾರ್ಯ ದರ್ಶಿ ಜಿತೇಂದ್ರ ಕುಂದೇ ಶ್ವರ ಕಾರ್ಯ ಕ್ರಮ ನಿರೂಪಿಸಿದರು.ಇದೇ ಸಂದರ್ಭದಲ್ಲಿ ಗಾಂಧಿ ನಗರ ಶಾಲಾ ವಿದ್ಯಾರ್ಥಿಗಳಿಗೆ ಕೆಐಒಸಿಎಲ್ ವತಿಯಿಂದ ಮಾಸ್ಕ್ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಗಿಡಗಳ ಬೀಜಗಳನ್ನು ವಿತರಿಸಲಾಯಿತು.