ಟ್ವಿಟರ್ ಖಾತೆ ರದ್ದು ಮತ್ತು ಟ್ವೀಟ್ ನೀಡುವುದರ ವಿರುದ್ಧ ಟ್ವಿಟರ್ ಸಂಸ್ಥೆ ಹೂಡಿರುವ ಮೊಕದ್ದಮೆ ಸಂಬಂಧ ಕರ್ನಾಟಕದ ಉಚ್ಚ ನ್ಯಾಯಾಲಯವು ಒಕ್ಕೂಟ ಸರಕಾರಕ್ಕೆ ನೋಟೀಸು ನೀಡಿದೆ. 

2021ರ ಫೆಬ್ರವರಿಯಿಂದ 2022ರ ಫೆಬ್ರವರಿವರೆಗೆ 175 ಟ್ವೀಟ್ ತೆಗೆಯಲು ಮತ್ತು 1,400ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ರದ್ದು ಪಡಿಸುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರ್ ಸಂಸ್ಥೆಗೆ ಹೇಳಿದೆ. ಈ ಮಾಹಿತಿಯನ್ನು ಜುಲಾಯಿ 8ರಂದು ಸಚಿವಾಲಯವು ಕೋರ್ಟಿಗೆ ನೀಡಿದೆ. 

ಇವುಗಳಲ್ಲಿ 39 ಲಿಂಕ್ ತುಂಡರಿಸಲು ಕೇಂದ್ರ ಸರಕಾರ ಹೇಳಿದ್ದರೆ ವಿರುದ್ಧ ಟ್ವಿಟರ್ ಸಂಸ್ಥೆ ಕೋರ್ಟಿನಲ್ಲಿ ಪ್ರಶ್ನಿಸಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನೋಟೀಸು ನೀಡಿತು.