ಉತ್ತರ ಪ್ರದೇಶದ ಆರು ದೂರ ದೂರದ ಪೋಲೀಸು ಠಾಣೆಗಳಲ್ಲಿ ಒಂದೇ ಎಫ್‌ಐಆರ್ ಪ್ರತಿ ದಾಖಲಿಸಿ ಆಲ್ಟ್ ನ್ಯೂಸ್ ಸಹ ಸ್ಥಾಪಕ ಮೊಹಮ್ಮದ್ ಜುಬೈರ್‌ರನ್ನು ಬಂಧನದಲ್ಲೇ ಇಡಲು ಒತ್ತಡ ಸೃಷ್ಟಿಸಿದ್ದನ್ನು ಸುಪ್ರೀಂ ಕೋರ್ಟ್ ಪೀಠವು ಪ್ರಶ್ನಿಸಿದೆ.

ಬಂಧಿಸಲು ಬಲವಾದ ಕಾನೂನಾತ್ಮಕ ಕಾರಣ ಇರಬೇಕು. ಬಂಧನವನ್ನೇ ಶಿಕ್ಷೆಯಾಗಿ ಮಾಡಬಾರದು. ಹಲವಾರು ಮೊಕದ್ದಮೆಗಳಲ್ಲಿ ವ್ಯಕ್ತಿಯನ್ನು ಬಂಧಿಸದೆಯೇ ಕೋರ್ಟ್ ವಿಚಾರಣೆಗೆ ಹಾಜರು ಪಡಿಸುವುದು ಸಾಧ್ಯವಿದೆ. ಯಾವುದೇ ಬಂಧನಕ್ಕೆ ಮುಂಚೆ ಪೋಲೀಸರು ದೂರು ಮಾತ್ರ ಗಮನಿಸುವುದಲ್ಲ. ದೂರಿನ ತೀವ್ರತೆ ಮತ್ತು ಸತ್ಯಾಸತ್ಯತೆಯನ್ನು ತಿಳಿದೇ ಬಂಧಿಸತಕ್ಕದ್ದು ಎಂದು ಹೈಕೋರ್ಟ್ ಪೀಠ ಸ್ಪಷ್ಟಪಡಿಸಿತು.