ಮಂಗಳೂರು: ಪಿಎಸ್ಎ್ಸ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸದೆ ಪಾರದರ್ಶಕ ತನಿಖೆ ನಡೆಸಬೇಕು ಹಾಗೂ ಸಚಿವ ಅಶ್ವತ್ಥ ನಾರಾಯಣ್ ಅವರ ರಾಜೀನಾಮೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಎನ್ಎಿಸ್ಯುವಐ ಸಮಿತಿ ಗುರುವಾರ ನಗರದ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಿತು.

ಈ ವೇಳೆ ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅಶ್ವಥ್ ನಾರಾಯಣ ಅವರ ಪಾತ್ರವಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪರೀಕ್ಷೆಯಲ್ಲಿ 5 ನೇ ರ್ಯಾಂಕ್ ಬಂದಿರುವ ದರ್ಶನ್ ಗೌಡ ಹಾಗೂ 10ನೇ ರ್ಯಾಂಕ್ ಬಂದಿರುವ ನಾಗೇಶ್ ಗೌಡ  ಎಂಬುವವರು ಅಶ್ವಥ್ ನಾರಾಯಣ ಅವರ ಸಂಬಂಧಿಕರು. ಈ ಇಬ್ಬರನ್ನು ವಿಚಾರಣೆಗೆ ಕರೆದು ಬಿಟ್ಟು ಕಳಿಸಿದ್ದಾರೆ. ಉಳಿದವರ ಬಂಧನವಾಗಿದೆ, ಈ ಇಬ್ಬರ ಬಂಧನ ಯಾಕೆ ಆಗಿಲ್ಲ? ಅಶ್ವಥ್ ನಾರಾಯಣ ಅವರ ಮೇಲೆ ಭ್ರಷ್ಟಾಚಾರದ ತೂಗುಗತ್ತಿ ನೇತಾಡುತ್ತಿದೆ. ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಎನ್ ಎಸ್ ಯುಐ ಉಪಾಧ್ಯಕ್ಷ ಫಾರೂಕ್ ಬಯಾಬೆ, ಶ್ವಾನ್ ಸಿರಿ, ನಿಖಿಲ್ ಶೆಟ್ಟಿ, ಬಾತೀಶ್ ಅಳಕೆಮಜಲು, ಶಕೀಲ್ ಉಳ್ಳಾಲ, ಶಾಹೀಲ್ ಎ.ಕೆ, ನಿಖಿಲ್ ಪೂಜಾರಿ, ಕೀರ್ತನ್ ಗೌಡ ಕೊಡಪಾಲ, ಕ್ರಿಸ್ಟನ್, ಅಝೀಮ್, ಉಬೈಸ್, ಸಫ್ವಾನ್ ಕುದ್ರೋಳಿ, ಭರತ್, ಅಖಿನೇಶ್ ಮತ್ತಿತರರು ಉಪಸ್ಥಿತರಿದ್ದರು.