ಮೂಡುಬಿದಿರೆ: ಧವಲತ್ರಯ ಜೈನ ಕಾಶಿ ಟ್ರಸ್ಟ್ ಇದರ ವತಿಯಿಂದ ನಡೆಯುತ್ತಿರುವ ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನ 2022 23 ನೇ ಸಾಲಿನ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವವು ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ 16.6.2022 ಗುರುವಾರ ದಂದು ಶ್ರೀ ಮಠ ದ ಭಟ್ಟಾರಕ ಸಭಾ ಭವನ ದಲ್ಲಿ ಬೆಳಿಗ್ಗೆ 10.30 ಕ್ಕೆ ನೆರವೇರಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಇತಿಹಾಸ ಸಂಶೋಧಕರಾದ ಉಮಾನಾಥ್ ಶೆಣೈಹಾಗೂ ವಿಜಯ ಕುಮಾರಿ ಶೆಣೈ ದಂಪತಿಗಳು ಮಠದ ವ್ಯವಸ್ಥಾಪಕರಾದ ಸಂಜಯ್ ಕುಮಾರ್ ಶೆಟ್ಟಿ ಇವರು ಭಾಗವಹಿಸಿದ್ದರು.  

ಕಾರ್ಯಕ್ರಮದಲ್ಲಿ ಮೂಡು ಬಿದಿರೆ ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜು ವಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಕಲಿಯುತ್ತಿರುವ  ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿ ನೀಯರು ಗಳಿಗೆ ಉಚಿತ ಲೇಖನ ಸಾಮಗ್ರಿಗಳನ್ನು ಶ್ರೀ ಗಳವರು ಧವಳತ್ರಯ ಜೈನ ಕಾಷಿ ಟ್ರಸ್ಟ್ (ರಿ) ಪರ ವಾಗಿ ಅತಿಥಿ ಗಳೊಂದಿಗೆ ವಿತರಿಸಿ ದರು ಪೂಜ್ಯ ಸ್ವಾಮೀಜಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿ ಜೀವನದ ಪ್ರತಿ ಕ್ಷಣ ಅಮೂಲ್ಯ ಉತ್ತಮ ಹವ್ಯಾಸ ಪಠ್ಯ ದೊಂದಿಗೆ ಆಟ,ಯೋಗ ಉತ್ತಮ ಜ್ಞಾನ ಸಂಗ್ರಹ ಇತರ  ಚಟುವಟಿಕೆ ಯೊಂದಿಗೆ ಕ್ರಿಯಾ ಶೀಲ ರಾಗಿ ಉತ್ತಮ ವಿದ್ಯಾರ್ಥಿಗಳಾಗಿ ಎಂದು ಹೇಳಿ ಆಶೀರ್ವಾದ ಮಾಡಿದರು. 

ಉಮಾನಾಥ್ ಶೆಣೈ ವಿದ್ಯಾರ್ಥಿ ಜೀವನ ಉತ್ತಮ ವಿಚಾರ, ಜ್ಞಾನ ದ ಅರಿವು ಹೆಚ್ಚಿಸುವ ಸಮಯ ಸದಾ ಉತ್ಸಾಹ ಜೀವನ ದಲ್ಲಿ ಮೈ ಗೂಡಿಸಿ ಕೊಳ್ಳಿ ಎಂದು ಕಿವಿಮಾತು ಹೇಳಿದರು ವಿಜಯಾ ಶೆಣೈ ಸ್ತ್ರಿ ಯರಿಗೆ ಉದ್ಯೋಗ ದಲ್ಲಿ 30% ರಷ್ಟು ಅವಕಾಶ ವಿದೆ ಉತ್ತಮ ಅಧ್ಯಯನ ಮಾಡಿ ಯಶಸ್ವೀ ಯಾಗಿ ಎಂದು ಶುಭ ಹಾರೈಕೆ ಮಾಡಿದರು ಹಾಗೂ ಟ್ರಸ್ಟ್ ಮೂಲಕ ಪುಸ್ತಕ ಲೇಖನ ಸಾಮಗ್ರಿ ದಾನ ಮಾಡಿದ ಶೆಣೈ ದಂಪತಿಗಳನ್ನು, ಆಳ್ವಾಸ್ ಕಾಲೇಜು ಇಂಗ್ಲಿಷ್ ಲೆಕ್ಚರರ್ ವಿವೇಕಾ ರನ್ನು ಮೂಡು ಬಿದಿರೆ ಶ್ರೀ ಗಳವರು ಶಾಲು ಸ್ಮರಣಿಕೆ ನೀಡಿ ಹರಸಿ ಆಶೀರ್ವಾದ ಮಾಡಿದರು ಕಾರ್ಯಕ್ರಮ ನಿರ್ವಹಣೆ ಯ ನ್ನು ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ಶ್ರೀ ನಿರ್ವಹಿಸಿದರು ಉಪನ್ಯಾಸಕರಾದ ಕುಮಾರಿ ವೇದಾ ವತಿ ಇವರು ಧನ್ಯವಾದವಿತ್ತರು.