ಮಂಗಳೂರು, ಸೆ. 11: ಸಂತ ಅಲೋಶಿಯಸ್ ಕಾಲೇಜಿನ ಕೆಮಿಸ್ಟ್ರಿ ವಿಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೆಮಿಸ್ಟ್ರಿ ಶಿಕ್ಷಕರ ಸಂಘಗಳು ಜಂಟಿಯಾಗಿ ಕಾಲೇಜಿನ ರಸ್ಕಿನ್ಹಾ ಆಡಿಟೋರಿಯಂನಲ್ಲಿ ನಡೆಯಿತು. 40ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು.

ಇಸ್ರೋದ ವಿಜ್ಞಾನಿಯಾಗಿದ್ದ ಶ್ರೀಕುಮಾರ್ ಅವರು ಮುಖ್ಯ ಅತಿಥಿಯಾಗಿದ್ದರು. ಭೌತ ವಿಜ್ಞಾನಿ ಆಗಿದ್ದ ಅವರು ತನ್ನ ಕಲಿಕೆಯ ಕಾಲದ ರಸಾಯನ ಶಾಸ್ತ್ರದ ಅನುಭವಗಳನ್ನು ಹಂಚಿಕೊಂಡರು. ನಮ್ಮ  ನೇಸರ ಕುಟುಂಬವು 460 ಕೋಟಿ ವರುಷ ಹಳೆಯದಾಗಿದೆ. ಸೂರ್ಯನಿಗಿಂತ ಹಿಂದಿನ ನಕ್ಷತ್ರ ಸೂರ್ಯ ಸಂಸಾರಗಳೂ ಈ ವಿಶ್ವದಲ್ಲಿವೆ. ಸೂರ್ಯನ ಬಿಸಿಮಟ್ಟ ಮತ್ತು ಜೀವಮಾನ ಅಂದಾಜು ಸಾಧ್ಯ ಹೊರತು ಸಂಪೂರ್ಣ ಅಧ್ಯಯನ ಕಷ್ಟವಾಗಿದೆ. ಸೂರ್ಯನ ಶಕ್ತಿ ಹೇಗೆ ಭೂಜೀವಿಗಳಿಗೆ ನೀಡಿದೆ. ಸೂರ್ಯನ ಬಿಸಿಮಟ್ಟದ ರೇಡಿಯೇಶನ್ ಜಲಜನಕದಿಂದ ಹೀಲಿಯಂ ಆಗುವವರೆಗೆ ಅದರ ಸುಡುಶಕ್ತಿ ಅತೀವವಾದುದು. 

ಮುಂದಿನ 50 ಕೋಟಿ ವರುಷಗಳಲ್ಲಿ ಸೂರ್ಯ ಸಾಯುವುದು ಖಚಿತ. ಇದು 50 ಲಕ್ಷಗಳಲ್ಲೇ ಆಗುವ ಸಾಧ್ಯವಿದೆ. ಸಾಯುವಾಗ ಅದು ಕಪ್ಪು ರಂಧ್ರವಾಗಿ ನುಂಗುಗೋಳ ಆಗುತ್ತದೆ. ಅನಂತರ ಸೂರ್ಯ ಸಂಸಾರವಾಗಲಿ, ಭೂಮಿಯಾಗಲಿ ಇಲ್ಲಿನ ಜೀವಜಂತುಗಳಾಗಲಿ ಇರುವುದಿಲ್ಲ. ಅಲ್ಲಿಗೆ ಬೇರೆ ಜೀವ ಇರುವ ಸೂರ್ಯ ಸಂಸಾರ ಇರುವ ಬಗೆಗೆ ಇಲ್ಲಿಯವರೆಗೆ ನಮಗೆ ಗೊತ್ತಿಲ್ಲ ಎಂದು ಡಾ. ಶ್ರೀಕುಮಾರ್ ಹೇಳಿದರು. ನಾನಾ ವಿಜ್ಞಾನ ಸಂಬಂಧಿ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಕೇಳಿದರು.

ಭಾರೀ ವೆಚ್ಚವಾಗುವುದರಿಂದ ಸೂರ್ಯನ, ಚಂದ್ರನ ಟೈಟಾನಿಯಂ ಮೊದಲಾದ ಅದಿರು ಗಣಿಗಾರಿಕೆ ಲಾಭದಾಯಕವಲ್ಲ.

ಕೆಮಿಸ್ಟ್ರಿಯಲ್ಲಿ ಅದ್ಭುತ ಸಾಧನೆ ಮಾಡಿದ ಕಾವ್ಯಾ ಗಣೇಶ್, ಕೀರ್ತನಾ, ಭೂಮಿಕಾ,  ಸುಖೇಶ್ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾಲೇಜಿನ ಮುಖ್ಯಸ್ಥರಾದ ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯವರು ಇಡೀ ಸಭಾಂಗಣವನ್ನು ವಿಜ್ಞಾನ ವ್ಯೋಮಕ್ಕೆ ಒಯ್ದುದನ್ನು‌ ಶ್ಲಾಘಿಸಿದರು. ಇಲ್ಲಿ ವಿಜ್ಞಾನಿಗಳು ಹುಟ್ಟಲಿದ್ದಾರೆ. ವಿಜ್ಞಾನವೇ ಎಲ್ಲ ವಿಚಾರಗಳಿಗೆ ಅಡಿಪಾಯ ಎಂದು ಅವರು ಹೇಳಿದರು.

ಕನಸು ಮತ್ತು ಆಸಕ್ತಿಗಳು ನಿಮ್ಮನ್ನು ಸಾಧನೆಯತ್ತ ಮುನ್ನಡೆಸುತ್ತವೆ ಎಂದೂ ಹೇಳಿದರು.