Image Source: Zee News-India.com

ನಿನ್ನೆ ಜಿ20 ಅಧ್ಯಕ್ಷರುಗಳು ದಿಲ್ಲಿಯಲ್ಲಿ ಗಾಂಧೀಜಿಯವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಎರಡು ದಿನಗಳ ಜಿ20 ಶೃಂಗ ಸಭೆ ಯಶಸ್ವಿಯಾಗಿ ಮುಗಿಯಿತು.

ಜಿ20 ಅಧ್ಯಕ್ಷತೆಯನ್ನು ಸಮಾರೋಪದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಬ್ರೆಜಿಲ್‌ನ ಅಧ್ಯಕ್ಷ ಲೂಯಿಸ್ ಇನಾಸಿಯೋ ಲುಲಾ ಡಿಸಿಲ್ವಾರಿಗೆ ಹಸ್ತಾಂತರ ಮಾಡಿದರು.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಮೊದಲಾದವುಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಬೇಕು ಎಂಬ ಬೇಡಿಕೆ ಇಡಲಾಯಿತು. ಚೀನಾ ಮತ್ತು ರಶಿಯಾಗಳು ಭಾಗವಹಿಸದಿದ್ದರೂ ಸಂದೇಶ ಕಳುಹಿಸಿದ್ದವು.