ಮೊರಾಕ್ಕೋ ಭೂಕಂಪದಲ್ಲಿ ಸತ್ತವರ ಸಂಖ್ಯೆಯು 2,012ಕ್ಕೇರಿದೆ. ಇದೇ ವೇಳೆ ಗಾಯಗೊಂಡಿರುವ ಸಾವಿರಾರು ಜನರಲ್ಲಿ 1,404 ಮಂದಿಯ ಸ್ಥಿತಿ ಗಂಭೀರವಾಗಿದೆ.
ನೆಲನಡುಕದಿಂದ ತನ್ನ ನೆಲೆ ಕಳೆದುಕೊಂಡಿರುವ ಚಾರಿತ್ರಿಕ ನಗರ ಮರಕೇಶ್‌ನಲ್ಲಿ ನಿನ್ನೆಯೂ 4.5 ತೀವ್ರತೆಯ ಭೂಕಂಪ ಆಗಿದೆ. ಈ ನೆಲನಡುಕದಲ್ಲಿ 3 ಲಕ್ಷ ಜನ ಬಾಧಿಸಲ್ಪಟ್ಟಿದ್ದಾರೆ.
ದೇಶದಲ್ಲಿ 3 ದಿನಗಳ ಶೋಕಾಚರಣೆ ಘೋಷಣೆ ಮಾಡಲಾಗಿದೆ.
ವಿದೇಶೀಯರಲ್ಲಿ ಫ್ರಾನ್ಸಿನ ಒಬ್ಬರು ಸತ್ತಿದ್ದು, 8 ಜನರು ಗಾಯಗೊಂಡಿದ್ದಾರೆ. ಫ್ರಾನ್ಸ್ ನೆರವು ಘೋಷಿಸಿದೆ.