ಮಂಗಳೂರು: "ಕೊಂಕಣಿ ಭಾಷೆಗೆ ಎಲ್ಲಾ ರೀತಿಯ ಸ್ಥಾನಮಾನ ದೊರಕಿದ್ದು, ಇಂದು ಕೊಂಕಣಿ ಭಾಷಿಗರು ಅದರ ಉಪಯೋಗ ಪಡೆಯಬೇಕು. ಶಾಲೆಯಲ್ಲಿ ಕೊಂಕಣಿ ಕಲಿಯುವ ಅವಕಾಶ ಇದೆ, ಸ್ನಾತಕೋತರ ಕೊಂಕಣಿ ಎಂ. ಎ ಮಾಡುವ ಅವಕಾಶ ಇದೆ. ಕೊಂಕಣಿ ಸಂಘ ಸಂಸ್ಥೆಗಳು ಹಾಗೂ ಅಭಿಮಾನಿಗಳು ವಿದ್ಯಾರ್ಥಿ ವೇತನ ಕೂಡಾ ನೀಡುತ್ತಿದ್ದಾರೆ. ಇದರ ಸದುಪಯೋಗ ಮಾಡಿ ಕೊಂಕಣಿ ಭಾಷೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕು ಎಂದು ಕೊಂಕಣಿ ಅಧ್ಯಯನ ಪೀಠ ಇದರ ಸಂಚಾಲಕ ಡಾ. ಜಯವಂತ ನಾಯಕ್ ತಿಳಿಸಿದರು.
ಕೊಂಕಣಿ ಸಾಂಸ್ಕೃತಿಕ ಸಂಘ ಅವರು ಆಯೋಜಿಸಿದ್ದ ಕೊಂಕಣಿ ಮಾನ್ಯತಾ ದಿನಾಚರಣೆಯಲ್ಲಿ ಪ್ರದಾನ ಮಾಡಿದ "ಕೊಂಕಣಿ ಸಾಂಸ್ಕೃತಿಕ ರಾಯಭಾರಿ" ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಎಸ್. ಎಲ್. ಶೇಟ್ ಜುವೆಲ್ಲರ್ಸ್ ಎಂಡ್ ಡೈಮಂಡ್ ಹೌಸ್ ಇದರ ಮಾಲಕ ಎಂ. ಪ್ರಶಾಂತ್ ಶೇಟ್ ಮುಖ್ಯ ಅತಿಥಿಗಳಾಗಿದ್ದರು. ಕೊಂಕಣಿ ಭಾಷೆ ಅತ್ಯಂತ ಶ್ರೇಷ್ಟ ಆಗಿದ್ದು ಅನೇಕ ಸಮುದಾಯಗಳು ಮಾತನಾಡುವ ಭಾಷೆ ಆಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಕೂಡಾ ಕೊಂಕಣಿ ಕಲಿಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತೇವೆ ಎಂದು ಅವರು ಘೋಷಿಸಿದರು.
ಪತ್ರಕರ್ತ ವೆಂಕಟೇಶ್ ಬಾಳಿಗಾ ಅವರು ಮಾನ್ಯತಾ ದಿನದ ಸಂದೇಶ ನೀಡಿದರು.
ಇದೇ ಸಮಾರಂಭದಲ್ಲಿ ಸಂಘದ ಸಂಸ್ಥಾಪಕ ಜಿ. ಜಿ. ವಾಸುದೇವ್ ಪ್ರಭು ಅವರ ಸ್ಮರಣೆ ಮಾಡಲಾಯಿತು. ಮಮತಾ ಕಾಮತ್ ಸಂಸ್ಮರಣೆಗೈದರು.
ಇನ್ನೋರ್ವ ಅತಿಥಿ, ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷೆ ಮಂಜುಳಾ ನಾಯಕ್ ಶುಭಾಶಯಗೈದರು.
ಸಂಘದ ಅಧ್ಯಕ್ಷ ಮಣೆಲ್ ಗಜಾನನ ಶೆಣೈ ಸ್ವಾಗತಿಸಿದರು. ಉಪಾಧ್ಯಕ್ಷೆ ಚಂದ್ರಿಕಾ ಬಾಳಿಗಾ, ಖಜಾಂಚಿ ರತ್ನಾಕರ ಕುಡ್ವ ವೇದಿಕೆಯಲ್ಲಿ ಉಪಸ್ಥಿತಿದ್ದರು. ಕಾರ್ಯದರ್ಶಿ ಕೃಷ್ಣ ಕಾಮತ ವಂದಿಸಿದರು. ಪ್ರತಿಮಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.