ಅತ್ತಾವರ : ಕಳೆದ ವರ್ಷ ಪೂಣೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂಲತಹ ಮಂಗಳೂರು ನಿವಾಸಿ ಡಾ| ಜೇಷಾ ರಿಮಿನ್ ರವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ರಕ್ತದಾನ ಶಿಬಿರವನ್ನು ತಾ| 11-09-2023ರಂದು ಬೆಳಗ್ಗೆ 9ಗಂಟೆಯಿಂದ ಮಧ್ಯಹ್ನ 1 ಗಂಟೆಯವರೆಗೆ ರೈಲ್ವೆ ಸ್ಟೇಷನ್ ರಸ್ತೆ ಅತ್ತಾವರ ಮಂಗಳೂರು ಇಲ್ಲಿನ ರಿಸರ್ವೆಷನ್ ಕೌಂಟರ್ ಮುಂಭಾಗವಿರುವ ಮಂಗಳೂರು ಕೊಂಕಣ ರೈಲ್ವೆ ಅಫೀಸಿ (KRIST) ನಲ್ಲಿ ಅಯೋಜಿಸಲಾಗಿದೆ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು  ಡಾ| ಜೇಷಾ ರಿಮಿನ್ ರವರ ಪೋಷಕರಾದ ಶ್ರೀಮತಿ ಮತ್ತು ಶ್ರೀ ಜೋನ್ ಥೋಮಸ್ ಹಾಗೂ ಶ್ರೀ ಜೇಷು ಜಾನ್ ರವರು ಪ್ರಕಟಣೆಯಲ್ಲಿ ಕೋರಿದ್ದಾರೆ.