ಹೆಬ್ರಿ ಸಂತೆಕಟ್ಟೆಯಲ್ಲಿ ಕೆಲಸ ಮುಗಿಸಿ ಉಡುಪಿಗೆ ಹಿಂತಿರುಗುತ್ತಿದ್ದ ಸಿಮೆಂಟ್ ಮಿಕ್ಸರ್ ಇದ್ದ ಟೆಂಪೋ ಹೊಸೂರು ಅಮ್ಮುಜೆ ಬಳಿ ಉರುಳಿ ಬಿದ್ದುದರಿಂದ ಅದರಲ್ಲಿದ್ದ ಹತ್ತು ಜನರು ಗಾಯಗೊಂಡರು. ಅವರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಬಾಗಲಕೋಟೆ ಮೂಲದ ಶೇಖಪ್ಪ ಮಾದರ, ಪತ್ನಿ ಲಕ್ಷ್ಮವ್ವ, ಮಲ್ಲವ್ವ, ಯಮುನಪ್ಪ ಗೊರವರ, ಭೀಮವ್ವ, ರೇಣವ್ವ, ಲಕ್ಷ್ಮೀ ಗಡಗಿ ಆಕೆಯ ಮಗ ಹುಡುಗ ವಿಠಲ ತೀವ್ರವಾಗಿ ಗಾಯಗೊಂಡಿದ್ದಾರೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.