
ಮಂಗಳೂರು ಮಹಾ ನಗರ ಪಾಲಿಕೆಯ(MCC) ನೂತನ ಮಹಾಪೌರರಾಗಿ ಆಯ್ಕೆಯಾದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಉಪ ಮಹಾಪೌರರಾಗಿ ಆಯ್ಕೆಯಾದ ಸುನೀತರವನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ.ರವರು ಕಾರ್ಯಲಯದಲ್ಲಿ ಅಭಿನಂದಿಸಿದರು. ಈ ಸಂದರ್ಭ ಪ್ರಮುಖರಾದ ಪ್ರಭಾಮಾಲಿನಿ, ರಾಮದಾಸ ಬಂಟ್ವಾಳ, ಕಸ್ತೂರಿ ಪಂಜ, ವಿಜಯ ಕುಮಾರ್ ಶೆಟ್ಟಿ, ಸಂದೇಶ್ ಶೆಟ್ಟಿ, ಹಾಗು ಮನಪಾ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು