ಬೆಂಗಳೂರಿನ ಸಂತ ಮೇರಿ ಬೆಸಿಲಿಕಾ ಮೇರಿ ಮಾತೆಯ ವಾರದ ಉತ್ಸವದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾರತವು ಭಾವೈಕ್ಯದ ಮನೆಯಾಗಿದ್ದು, ಸಂತ ಮೇರಿ ಪೇರಿಗರ್ಜಿ ಆ ಭಾವೈಕ್ಯತೆಗೆ ಬಹು ದೊಡ್ಡ ಉದಾಹರಣೆ ಆಗಿದೆ ಎಂದರು.

ಈ ಬೆಸಿಲಿಕಾಕ್ಕೆ ಎಲ್ಲ ಜಾತಿ ಧರ್ಮಗಳವರು ಬರುತ್ತಾರೆ, ಎಲ್ಲ ಬಣ್ಣದ ಬಟ್ಟೆಗಳವರು ಬರುತ್ತಾರೆ. ಇದು ಸೌಹಾರ್ದ. ದ್ವೇಷ ಹರಡುವವರು ಕಂಡರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿದ್ದರಾಮಯ್ಯನವರು ಎಚ್ಚರಿಸಿದರು.

ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ರೂ. 100 ಕೋಟಿ ಮೀಸಲಾಗಿದೆ. ಸೂಕ್ತ ಅಧ್ಯಕ್ಷರ ಆಯ್ಕೆ ಆಗುತ್ತಲೇ ಅದು ಕೆಲಸ ಆರಂಭಿಸಲಿದೆ ಎಂದೂ ಅವರು ತಿಳಿಸಿದರು.