ಆರು ರಾಜ್ಯಗಳ ಏಳು ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟವು ನಾಲ್ಕರಲ್ಲಿ ಟಾನಿಕ್ ಗೆಲುವು ಪಡೆದಿದೆ. ಮೂರು ಬಿಜೆಪಿ ಪಾಲಾಗಿದೆ

ಕೇರಳದ ಪುತುಪಳ್ಳಿಯನ್ನು ಅಯ್ವತ್ತು ವರುಷಗಳಿಂದ ಪ್ರತಿನಿಧಿಸುತ್ತಿದ್ದ ಮಾಜೀ ಮುಖ್ಯಮಂತ್ರಿ ಊಮ್ಮನ್ ಚಾಂಡಿ ನಿಧನದಿಂದ ತೆರವಾದ ಸ್ಥಾನವನ್ನು ಅವರ ಮಗ ಕಾಂಗ್ರೆಸ್ಸಿನ ಚಾಂಡಿ ಉಮ್ಮನ್ ಉಳಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಘೋಸಿ ಕ್ಷೇತ್ರವನ್ನು ಸಮಾಜವಾದಿ ಪಕ್ಷವು ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ ಗೆದ್ದಿದೆ. ಜಾರ್ಖಂಡ್‌ನ ದುಮ್ರಿ ಕ್ಷೇತ್ರವನ್ನು ಜಾರ್ಖಂಡ್ ಮುಕ್ತಿ ಮೋರ್ಚಾದ ಬೇಬಿ ದೇವಿ ಜಯಿಸಿದ್ದಾರೆ. ಪಡುವಣ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯು ಬಿಜೆಪಿ ಕೈಯಲ್ಲಿದ್ದ ದುಪ್ಗುರಿ ಕ್ಷೇತ್ರವನ್ನು ಕಸಿದುಕೊಂಡಿದೆ.

ತ್ರಿಪುರಾದ ಎರಡು ಮತ್ತು ಉತ್ತರಾಖಂಡದ ಒಂದು ಕ್ಷೇತ್ರಗಳನ್ನು ಬಿಜೆಪಿ ಅಲ್ಪ ಅಂತರದಲ್ಲಿ ಉಳಿಸಿಕೊಂಡಿದೆ