ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮ ಪಂಚಾಯತಿಯ ಕುದ್ಕಾಡಿಯಲ್ಲಿ ಮನೆಯ ಯಜಮಾನನನ್ನು ಕಟ್ಟಿ ಹಾಕಿ ಎಂಟು ಜನರ ತಂಡ ದರೋಡೆ ಮಾಡಿದೆ.

ಕುದ್ಕಾಡಿಯ ಗುರುಪ್ರಸಾದ ರೈ ಮಾಜೀ ಗ್ರಾಮ ಪಂಚಾಯತಿ ಸದಸ್ಯರು. ಅವರನ್ನು ಕಟ್ಟಿ ಹಾಕಿ, ಅವರ ತಾಯಿಯನ್ನು ಕೂಡಿ ಹಾಕಿ, ಚಾಕುಗಳಿಂದ ಬೆದರಿಸಿ ದರೋಡೆ ನಡೆದಿದೆ. 40,000 ನಗದು ಮತ್ತು 15 ಪವನ್ ಬಂಗಾರವನ್ನು ದರೋಡೆಕೋರರು ದೋಚಿದ್ದಾರೆ. 

ವಿಚಿತ್ರವೆಂದರೆ ತುಳು ಕನ್ನಡದಲ್ಲಿ ಮಾತನಾಡುತ್ತಿದ್ದ ದರೋಡೆಕೋರರು ಒಂದೂವರೆ ಗಂಟೆ ಕಾಲ ಮನೆಯೊಳಗಿದ್ದು ಎಲ್ಲವನ್ನೂ ಜಾಲಾಡಿದ್ದಾರೆ. ಮುಂಜಾವ 2 ಗಂಟೆಯ ಹೊತ್ತಿಗೆ ಬಂದವರು ಮೂರೂವರೆ ಗಂಟೆಯವರೆಗೆ ಹುಡುಕಿದ್ದಾರೆ. ಪುತ್ತೂರು ಗ್ರಾಮಾಂತರ ಪೋಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.