ಉಡುಪಿಯ ಮಹಾತ್ಮಾ ಗಾಂಧೀಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಫೆಬ್ರವರಿ 27ರಂದು ಕೊರಗ ಸಮಾಜದವರ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.
ತುಳುನಾಡಿನ ವಿಶಿಷ್ಟ ಶೋಷಿತ ಜನವರ್ಗ ಕೊರಗ ಜನಾಂಗದವರು. ಬುಡಕಟ್ಟು ಜನರಾದ ಇವರಲ್ಲಿ ಇತ್ತೀಚೆಗಷ್ಟೇ ಕಲಿಕೆ ಕ್ರೀಡೆಗಳತ್ತ ಎಚ್ಚರ ಮೂಡುತ್ತಿದೆ.
ಕಳೆದ ವರುಷ ಕೊರಗ ಶಿಕ್ಷಕಿಯರ ಸಂಖ್ಯೆ ಗಮನಿಸಿದಾಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೇಳು ಜನರಷ್ಟೆ ಕಂಡು ಬಂದರು.
ಶೈಕ್ಷಣಿಕವಾಗಿ ಹಿಂದುಳಿದ ಇವರಲ್ಲಿ ಕ್ರೀಡಾ ಸ್ಪೂರ್ತಿ ಹಚ್ಚಲು ನಡೆದ ಈ ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು. ಇತರ ಜನವರ್ಗ ಇನ್ನೂ ದೂರದಲ್ಲಿ ಇಣುಕಿ ಹೋಗುವುದು ಕಂಡಿತು.
ಇಡೀ ದಿನ ನಡೆದ ಕಾರ್ಯಕ್ರಮದ ಬಳಿಕ ಸಂಜೆ ಬಹುಮಾನ ವಿತರಣೆ ನಡೆಯಿತು. ಇದರಲ್ಲಿ ಭಾಗವಹಿಸಿದ ಕೊರಗ ಜನಾಂಗದಲ್ಲಿ ಡಾಕ್ಟರೇಟ್ ಮಾಡಿದ ಮೊದಲಿಗರಾದ ಸಬಿತಾ ಅವರು ಕೊರಗ ಜನಾಂಗದ ಜನಸಂಖ್ಯೆ ಇಳಿಮುಖ ಆಗುತ್ತಿರುವುದರ ಬಗೆಗೆ ಖೇದ ವ್ಯಕ್ತಪಡಿಸಿದರು.
ಇಡೀ ಆಧುನಿಕ ಮತ್ತು ಸಾಂಪ್ರದಾಯಿಕ ಆಟಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಹಿರಿಯರೂ ಮಕ್ಕಳ ಉತ್ಸಾಹದಲ್ಲಿ ಒಂದಾದರು.