ಕೆಫೆ ಕಾಫಿ ಡೇ ಮೂಲಕ ಖ್ಯಾತರಾಗಿದ್ದ ವಿ. ಜಿ. ಸಿದ್ಧಾರ್ಥ್ ಬಗೆಗೆ ಟಿ ಸೀರೀಸ್ ಮತ್ತು ಅಲ್‌ಮೈಟಿ ಮೋಶನ್ ಪಿಕ್ಚರ್ಸ್‌‌ನವರು ಸೇರಿ ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್‌ ಬ್ಯಾನರ್‌ನಲ್ಲಿ ಕಾಫಿ ಕಿಂಗ್ ಎಂಬ ಸಿನಿಮಾ ತಯಾರಿಸುತ್ತಿದ್ದಾರೆ.

ತನಿಖಾ ಪತ್ರಕರ್ತರಾದ ರುಕ್ಮಿಣಿ ರಾವ್ ಮತ್ತು ಪ್ರಸೇನ್‌ಜಿತ್ ಬರೆದಿರುವ 'ಕಾಫಿ ಕಿಂಗ್- ದ ಸ್ವಿಫ್ಟ್ ರೈಸ್ ಆಂಡ್ ಸಡನ್ ಡೆತ್ ಆಫ್ ಕೆಫೆ ಕಾಫಿ ಡೇ ಫೌಂಡರ್ ವಿ. ಜಿ. ಸಿದ್ಧಾರ್ಥ್' ಪುಸ್ತಕದ ಆಧಾರದಲ್ಲಿ ಈ ಚಿತ್ರ ತಯಾರಾಗುತ್ತದೆ.

ಹಲವಾರು ದೇಶಗಳಲ್ಲಿ 1,800ಕ್ಕೂ ಹೆಚ್ಚು ಕೆಫೆ ಕಾಫಿ ಡೇ ಸ್ಥಾಪಿಸಿ, 10,000ದಷ್ಟು ಉದ್ಯೋಗ ಸೃಷ್ಟಿಸಿದ್ದ ಸಿದ್ಧಾರ್ಥ್ ಮಂಗಳೂರಿನ ನೇತ್ರಾವತಿಯಲ್ಲಿ ಅಂತ್ಯ ಕಂಡಿದ್ದರು.