ಮಂಗಳೂರು: ಬೆಂದೂರಿನ ಸೈ೦ಟ್   ತೆರೇಸಾ ಸ್ಕೂಲ್ ನಲ್ಲಿ  ಹೊಸದಾಗಿ ದಾಖಲಾದ ವಿದ್ಯಾರ್ಥಿಗಳ ಪೋಷಕರಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಶಾಂತಿಕಿರಣ್ ಕೌನ್ಸಿಲಿಂಗ್  ಸೆಂಟರ್ ಬಜ್ಜೋಡಿ,  ನಂತೂರು  - ಇದರ ನಿರ್ದೇಶಕರಾದ ಫಾ |ಅರುಣ್ ಲೋಬೊ ಇವರು ಸಂಪನ್ಮೂಲ ವಕ್ತಿಯಾಗಿ ಆಗಮಿಸಿ,  ಪೋಷಕರು ತಮ್ಮ ಮಕ್ಕಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಬೇಕು. ಮಕ್ಕಳಿಗೆ ತಮ್ಮ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿ, ಸ್ವತಂತ್ರರಾಗಿ ಬೆಳೆಯಲು ಅವಕಾಶ ನೀಡಬೇಕೆಂದು ಹೇಳಿದರು.

ಶಾಲಾ ಪ್ರಾಂಶುಪಾಲರಾದ ಭ | ಲೂರ್ಡ್ಸ್ ಅವರು  ಶಾಲೆಯಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ಶಿಸ್ತು ಮತ್ತು ಶಾಲೆಯ ನೀತಿ, ನಿಯಮಗಳ ಬಗ್ಗೆ ತಿಳಿಸಿದರು. ಉಪಪ್ರಾಂಶುಪಾಲರಾದ ಭ |ಕ್ಯಾರೆನ್, ಶಾಲಾ ಸಂಯೋಜಕರಾದ ಭ | ವಿಂಜೋಯ್, ಭ |ಗ್ರೇಸ್  ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.