ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಬಾಬಾ ಸಾಹೇಬ್ ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಇದೇ ಪ್ರಧಾನಿ ಮೋದಿಯವರು ಮತ್ತೆ ಉದ್ಘಾಟಿಸಿ ವಿವಾದಕ್ಕೆ ಕಾರಣರಾದರು.

ಅಂಬೇಡ್ಕರ್ ಅರ್ಥಶಾಸ್ತ್ರದ ಶಾಲೆ ತೆರೆಯಲು ತಾನು ಲಂಡನ್‌, ದಿಲ್ಲಿಗಳಲ್ಲಿ ಓಡಾಡಿ ಪಟ್ಟ ಶ್ರಮವನ್ನು ನೆನಪಿಸಿ ಪ್ರಿಯಾಂಕಾ ಖರ್ಗೆ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಬಿಜೆಪಿ ಸರಕಾರವು ಅಂಬೇಡ್ಕರ್ ಅರ್ಥಶಾಸ್ತ್ರ ಶಾಲೆಯ ಆಡಳಿತವನ್ನು ದುರ್ಬಲಗೊಳಿಸಿದೆ ಎಂದೂ ಹೇಳಿದ್ದಾರೆ.

ಮಾಜೀ ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸಿದ್ದ ಅಂಬೇಡ್ಕರ್ ಅರ್ಥಶಾಸ್ತ್ರ ಶಾಲೆಯನ್ನು ಮೋದಿ ಮತ್ತೆ ಉದ್ಘಾಟಿಸುವುದರಲ್ಲಿ ಏನು ಹೆಚ್ಚುಗಾರಿಕೆ ಇದೆ ಎಂದು ಸಿದ್ದರಾಮಯ್ಯ ಟ್ವೀಟಿದ್ದಾರೆ.