ಲೋಕದ ಯಾವ ಮೂಲೆಗೆ ಹೋದರೂ ನಾವು ಮಾತೃ ಭಾಷೆ ತಾಯಿ ನೆಲದ ಋಣವನ್ನು ಮರೆಯದೆ ತಮ್ಮ ಕೈಯಲ್ಲಿ ಆಗುವ ಸೇವೆ ಮಾಡಲೇ ಬೇಕು ಎಂದು ಪುತ್ತೂರು ಸಂತ ಫಿಲೋಮಿನ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಫಾ ಡಾಕ್ಟರೇಟ್‌ ಆ್ಯಂಟನಿ ಪ್ರಕಾಶ್ ಮೊಂತೆರೊ ನುಡಿದರು.

ಅವರು ಇಂದು ತಮ್ಮ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಪುತ್ತೂರು ಮತ್ತು ಅವರ ತುಳು ಸಾಹಿತ್ಯ ಸಂಘ ಜಂಟಿಯಾಗಿ ನಡೆಸಿದ ಮೌಖಿಕ ಜನಪದ ಒರಿಪಾವುನ ನಿಲೆ  ಗೇನೊದ ಬೊಟ್ಟು ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿದರು.

ದೀಪ ಬೆಳಗಿಸಿ ಉದ್ಘಾಟಿಸಿದ  ಪುತ್ತೂರಿನ ಖ್ಯಾತ ವಕೀಲರು,ತುಳು ಅಕಾಡೆಮಿ ಸದಸ್ಯರು ಆದ ಕುಂಬ್ರ ದುರ್ಗಾಪ್ರಸಾದ ರೈಯವರು; ಮೌಖಿಕವಾಗಿ ಉಳಿದ ತುಳು ಭಾಷೆಯಲ್ಲಿ ಪಾಡ್ದನ, ಎದುರು ಕತೆ, ಉರೊಲು, ಬಯಲಾಟ,ದೈವ ಆರಾಧನೆ ನಿಜವಾಗಿ ಒಂದು ಸಂಸ್ಕೃತಿಯ ಉಳಿವು ಆಗಿದೆ. ಮಕ್ಕಳು ಅದನ್ನು ಮುಂದೆ ಕೊಂಡೊಯ್ಯಬೇಕು ಎಂದರು.

ಮಾಹಿತಿ ಭಾಷಣ ಮಾಡಿದ ಜಯಲಕ್ಷ್ಮಿ ರಾಜೇಂದ್ರ ಶೆಟ್ಟಿ ಯವರು ಮಾತನಾಡುತ್ತಾ ಭಾಷೆ ಉಳಿಯುತ್ತದೆ. ಮಕ್ಕಳು ಮನೆಯ ಮತ್ತು ಹೊರಗಿನ ಎಲ್ಲಾ ಜನರ ಬಳಿ‌ ಸಂವೇದನೆ ತುಳು ಭಾಷೆಯಲ್ಲಿ ಹಂಚಿಕೊಳ್ಳಲು ಕರೆ ನೀಡಿದರು.

ತುಳು ಪೀಠದ ಸಂಯೋಜಕ, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾಕ್ಟರೇಟ್‌ ಮಾಧವ ಎಂಕೆ ತುಳು ಪೀಠದ ಪರಿಚಯ ಮಾಡಿಕೊಟ್ಟರು. ಪಿಂಗಾರ ಪತ್ರಿಕೆಯ ಸಂಪಾದಕ ಹಿರಿಯ ಪತ್ರಕರ್ತ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ಗೌರವ ಅತಿಥಿ ಆಗಿದ್ದರು.

ಉಪ‌ ಪ್ರಾಂಶುಪಾಲರು ವಿಜಯ್ ಕುಮಾರ್ ಮೊಳೆಯರ ಜೊತೆಯಲ್ಲಿ ಇದ್ದರು

ಮೊದಲಿಗೆ  ಕಾಲೇಜಿನ ತುಳು‌ ಸಂಘದ ಸಂಯೋಜಕರಾದ ಪ್ರಶಾಂತ ರೈ ಸ್ವಾಗತಿಸಿ, ಆಕ್ಶತಾ ಬಿ‌ ರೈ ವಂದಿಸಿದರು.

ಪ್ರಸಾದ್ ಅಂಚನ್ ನಿರೂಸಿದರು