ಮಂಗಳೂರು: "ವಿಶ್ವ ಕೊಂಕಣಿ ಸಮಹಿತ ಕಾರ್ಯಯೋಜನೆ" ಇದರ ಉದ್ಘಾಟನೆ ಹಾಗೂ ಮೊದಲ ಸಭೆ ಇತ್ತಿಚೆಗೆ ವಿಶ್ವಕೊಂಕಣಿ ಕೇಂದ್ರದಲ್ಲಿ ಜರುಗಿತು. ಉಡುಪಿಯ ಮಾನವ ಹಕ್ಕು ರಕ್ಷಣಾ ಪ್ರತಿಷ್ಟಾನದ ಗೌರಾನ್ವಿತ ರವೀಂದ್ರನಾಥ ಶ್ಯಾನಭಾಗ್ ಹಾಗೂ ಕೇಂದ್ರದ ಅಧ್ಯಕ್ಷ ಸಿ. ಎ. ನಂದಗೋಪಾಲ್ ಶೆಣೈ, ಉಪಾಧ್ಯಕ್ಷ ರಮೇಶ್ ನಾಯಕ್ ಪದಾಧಿಕಾರಿಗಳು ಉದ್ಘಾಟನಾ ಸಭೆಯಲ್ಲಿ ಭಾಗವಹಿಸಿದರು.
ಸಮಾಜದಲ್ಲಿ ಅಗತ್ಯವುಳ್ಳವರಿಗೆ ಆಪ್ತಸಲಹೆ ನೀಡಲು ಸ್ವಯಂ ಮುಂದೆ ಬಂದಿರುವ ಕಾರ್ಯಕರ್ತರಿಗೆ ಸೂಕ್ತ ಮಾರ್ಗದರ್ಶನ ತರಬೇತಿ ನೀಡುವುದು ಈ ಸಮಹಿತ ಸಭೆಯ ಧ್ಯೆಯವಾಗಿತ್ತು. ಸಭೆಗೆ ಹಾಜರಾದವರು ಕಾರ್ಯಯೋಜನೆಯಂತೆ ಮುಂದೆ ತಮ್ಮ ವತಿಯಿಂದ ಹೇಗೆ ಕಾರ್ಯಪ್ರವೃತ್ತರಾಗಬೇಕೆಂಬ ವಿಚಾರದಲ್ಲಿಯೂ ಚರ್ಚೆ ನಡೆಸಿದರು.