ತಂಬಾಕಿನ ಕೆಡುಕು ಸುಖ ಸಂತೋಷಕ್ಕೆ ತೊಡಕು

•    ಪ್ರಪಂಚದ ಅತೀ ಮಾರಕ ಮತ್ತು ಮಾರಣಾಂತಿಕ ವ್ಯಸನವೇ ತಂಬಾಕು ಸೇವನೆಯಾಗಿದೆ. 

•    ವಿಶ್ವ ಆರೋಗ್ಯ ಸಂಸ್ಥೆಯು ವ್ಯಸನವೆಂಬುದು ರೋಗವೆಂಬುದಾಗಿ 1956ರಲ್ಲಿ ಘೋಷಿಸಿದೆ.  

•    ವಾರ್ಷಿಕವಾಗಿ ಪ್ರಪಂಚದಾದ್ಯಂತ 6 ಮಿಲಿಯನ್ ಜನರನ್ನು ಸಾಯಿಸುವ ಅಪಾಯಕಾರಿ ರೋಗ ಇದಾಗಿದೆ. ಭಾರತದಲ್ಲಿ ಪ್ರತೀ ವರ್ಷ 10 ಲಕ್ಷ ಜನರು ಧೂಮಪಾನದಿಂದ ಸಾಯುತ್ತಿದ್ದಾರೆ. ಅಂದರೆ ಪ್ರತೀ ದಿನ ಸರಾಸರಿ 2200ಕ್ಕೂ ಹೆಚ್ಚು ಭಾರತೀಯರು ತಂಬಾಕು ಸೇವನೆಯ ಸಾಲಿಗೆ ಗುರಿಯಾಗಿದ್ದಾರೆ.

•    ಭಾರತದ ಪ್ರತೀ 100 ಕ್ಯಾನ್ಸರ್ ಪ್ರಕರಣಗಳಲ್ಲಿ 50 ರೋಗಿಗಳು ತಂಬಾಕು ಸೇವನೆಯಿಂದ ಕ್ಯಾನ್ಸರ್ ಒಳಗಾದವರು. ಈ ಪೈಕಿ ನಾಲಿಗೆ, ಬಾಯಿ, ಹಲ್ಲು, ಗಂಟಲು, ಸ್ವಾಶಕೋಶದ ಕ್ಯಾನ್ಸರ್‍ಗಳಾಗಿವೆ.

•    ತಂಬಾಕು ಸೇವನೆಯು ಪಾಶ್ರ್ವವಾಯು, ರಕ್ತದೊತ್ತಡ, ಹೃದಯಾಘಾತ, ಶ್ವಾಸಕೋಶದ ಸಮಸ್ಯೆ, ಅಸ್ತಮ, ಕ್ಷಯ, ಕಫ, ಎದೆಯ ಸೋಂಕುಗಳು, ಗರ್ಭಪಾತ, ಫಲವತ್ತತೆಯಲ್ಲಿ ಕ್ಷೀಣತೆ, ಶಿಶು ಜನನದಲ್ಲಿ ಏರುಪೇರು, ಗರ್ಭಕಂಠದ ಕ್ಯಾನ್ಸರ್, ಕುರುಡುತನ., ಹೀಗೆ, ವಿವಿಧ ಕಾಯಿಲೆಗಳಿಗೂ ಕಾರಣವಾಗುತ್ತದೆ.

•    ಒಂದು ಸಿಗರೇಟ್ ಸೇವನೆ 5 ನಿಮಿಷದ ಆಯುಷ್ಯವನ್ನು ಕೊಲ್ಲುತ್ತದೆ.

•    ತಂಬಾಕು ಸೇವನೆ ಮಾಡುವವರು ತಂಬಾಕು ಸೇವನೆ ಮಾಡದವರಿಗಿಂತ 10 ವರ್ಷ ಮುಂಚಿತವಾಗಿ ಸಾಯುತ್ತಾರೆಂಬುದು ಸಮೀಕ್ಷೆಯಿಂದ ಸಾಬೀತಾಗಿದೆ. 

•    ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ದುಷ್ಪರಿಣಾಮಗಳಿಗೆ ಜನರು ಸಾವನ್ನಪ್ಪುತ್ತಾರೆ. 

•    ಪ್ರತೀ 10 ಜನರ ಸಾವಿನಲ್ಲಿ ಒಬ್ಬ ಧೂಮಪಾನಿ ಇದ್ದಾನೆ ಎಂಬುದು ಆತಂಕಕಾರಿಯಾಗಿದೆ. ಶೇ.80 ಧೂಮಪಾನಿಗಳು ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿದ್ದಾರೆ. 

•    ಧೂಮಪಾನವು ಅತೀ ಸಣ್ಣ ವಯಸ್ಸಿನಲ್ಲಿ ಪ್ರಾರಂಭಿಸುವ ಚಟವಾಗಿದೆ. 

•    ಅಂಕಿ ಅಂಶಗಳ ಪ್ರಕಾರ 2030ನೇ ಇಸವಿಗೆ ಸುಮಾರು 10 ಮಿಲಿಯನ್ ಜನರು ಅಂದರೆ ಪ್ರಪಂಚದ ಅತೀ ಹೆಚ್ಚು ಸಾವಿಗೆ ಕಾರಣವಾಗುವ ಪ್ರಮುಖ ವಿಚಾರದಲ್ಲಿ ಧೂಮಪಾನ ಮೊದಲನೇ ಸ್ಥಾನಕ್ಕೆ ಬರಬಹುದೆಂದು ಊಹಿಸಲಾಗಿದೆ. 

•    ಧೂಮಪಾನದಲ್ಲಿ ಪ್ರಮುಖವಾಗಿ ಸಿಗರೇಟ್, ಬೀಡಿ, ಗುಟ್ಕಾ., ಮುಂತಾದ ಹೊಗೆಸೊಪ್ಪು ಪದಾರ್ಥಗಳಲ್ಲಿ ವಿಷಕಾರಿ ಅಂಶಗಳು ಒಳಗೊಂಡಿರುತ್ತದೆ. 

•    ಸಿಗರೇಟ್‍ನಲ್ಲಿ 4000ಕ್ಕೂ ಮಿಕ್ಕಿದ ರಾಸಾಯನಿಕ ಸಂಯುಕ್ತಗಳು, 200ಕ್ಕೂ ಹೆಚ್ಚಿನ ವಿಷಗಳು, 43ಕ್ಕೂ ಹೆಚ್ಚಿನ ಕ್ಯಾನ್ಸರ್‍ಕಾರಕ ವಸ್ತುಗಳು ಒಳಗೊಂಡಿವೆ. 

•    ತಂಬಾಕಿನಿಂದ ತಯಾರಾದ ಯಾವುದೇ ವಸ್ತುಗಳು ಸುರಕ್ಷಿತವಲ್ಲ. ಇದರಿಂದ ನಯಾಪೈಸೆಯ ಪ್ರಯೋಜನ ಇಲ್ಲವೆಂದು ತಿಳಿಯಬೇಕು. ಹಾಗೂ ಪರೋಕ್ಷ ಧೂಮಪಾನವು ಪ್ರತ್ಯಕ್ಷ ಧೂಮಪಾನದಷ್ಟೇ ಅಪಾಯಕಾರಿಯಾಗಿದೆ.

•    ದೇಶದ ಶೇ.21 ಯುವಜನತೆಯು ಧೂಮಪಾನಕ್ಕೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದು ಬಹಳ ಆತಂಕದ ವರದಿಯಾಗಿದೆ. 

•    ತಂಬಾಕು ಸೇವನೆ ಮಾಡಿದವರಲ್ಲಿ ಬಹುತೇಕ ಜನ ತಮ್ಮ 18ರ ವಯಸ್ಸಿನಲ್ಲಿಯೇ ಆರಂಭಿಸುವುದಾಗಿ ಅಂಕಿ ಸಂಖ್ಯೆಗಳು ತಿಳಿಸುತ್ತವೆ. 


ತಂಬಾಕು ಬಿಡಲು ಸುಲಭ ಮಾರ್ಗಗಳು:

•    ಧೂಮಪಾನ ಬಿಡಲು ನಿರ್ಧರಿಸುವ ವ್ಯಕ್ತಿಗೆ ಮಾನಸಿಕವಾಗಿ ಕಿರಿಕಿರಿಯಾಗುವುದು, ಹೆದರಿಕೆ, ಆತಂಕ, ನಿದ್ರಾಹೀನತೆ, ತಲೆನೋವು ಕಾಣಿಸಿಕೊಳ್ಳಬಹುದು. ಇವೆಲ್ಲವೂ ವರ್ಜನೆಯ 7 ದಿನಗಳವರೆಗೆ ಇರುತ್ತದೆ. ನಂತರದಲ್ಲಿ ಸ್ವಾಶಕೋಶದ ಕಾರ್ಯವು ವೃದ್ಧಿಸಿಕೊಂಡು ರಕ್ತಪರಿಚಲನೆಯ ಸುಧಾರಣೆಯಾಗುತ್ತದೆ. ಕೆಮ್ಮು, ಸೈನಸ್, ಆಯಾಸ, ಉಸಿರಾಟದ ತೊಂದರೆ, ಸ್ವಾಸಕೋಶದ ಸೋಂಕಿನ ಆವೃತ್ತಿ ಕಡಿಮೆಯಾಗುತ್ತದೆ. 

•    ಧೂಮಪಾನ ವರ್ಜನೆಯ ಸಭೆಗಳಲ್ಲಿ ಭಾಗವಹಿಸುವುದು.

•    ಧೂಮಪಾನ ಸೇವನೆಯ ನಿಧಾರವನ್ನು ಬಲಿಷ್ಠಗೊಳಿಸಲು ಪ್ರಯತ್ನಿಸುವುದು.

•    ದೃಢ ನಿರ್ಧಾರದೊಂದಿಗೆ ಸಂಕಲ್ಪ ಶಕ್ತಿಯನ್ನು ಪಡೆಯುವುದು.

•    ತಂಬಾಕಿನ ಕೆಡುಕುಗಳ ಕುರಿತಾಗಿ ಮಾಹಿತಿ ಪಡೆದು ತ್ಯಜಿಸಲು ನಿರ್ಧರಿಸುವುದು ಹಾಗೂ ಬದ್ಧರಾಗಿರುವುದು.

•    ತಂಬಾಕಿಗೆ ಆಕರ್ಷಣೆವೊಡ್ಡುವ ಸಂಗತಿ, ಸನ್ನಿವೇಶಗಳಿಂದ ದೂರ ನಿಲ್ಲುವುದು.

•    ತಂಬಾಕು ಸೇವನೆ ಮಾಡದವರ ಸಂಪರ್ಕದಲ್ಲಿ ಇರುವುದು ಮತ್ತು ಕುಟುಂಬದವರ, ಗೆಳೆಯರ ಪ್ರಶಂಸೆಗೆ ಪಾತ್ರರಾಗುವುದು.

•    ತಂಬಾಕು ಸೇವನೆಯ ಕಾರಣಗಳನ್ನು ಪಟ್ಟಿ ಮಾಡಿ ಅಂತಹ ವ್ಯಕ್ತಿ, ಸಮಯ, ಸ್ಥಳದಿಂದ ದೂರ ಇರುವುದು.

•    ಆಹಾರ ಕ್ರಮ, ವಿಶ್ರಾಂತಿ, ವ್ಯಾಯಾಮ, ಯೋಗಾಭ್ಯಾಸ, ಕ್ರೀಡೆ, ಆಟೋಟ, ಸಮಾಜಸೇವೆ, ಪ್ರಾರ್ಥನೆ, ಧ್ಯಾನ, ಉತ್ತಮ ಜೀವನ ಶೈಲಿಯನ್ನು ಬೆಳೆಸಿಕೊಂಡರೆ ದುರಾಭ್ಯಾಸಗಳ ಮೇಲೆ ವ್ಯಾಮೋಹ ಕಡಿಮೆಯಾಗುತ್ತದೆ.

•    ಈ ಮೇಲಿನ ಯಾವುದೇ ಪ್ರಯತ್ನಗಳು ಫಲಕಾರಿಯಾಗದಿದ್ದಲ್ಲಿ ಮನೋಶಾಸ್ತ್ರಜ್ಞರನ್ನು ಕಾಣುವುದು. 

ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯನ್ನು ನಿಯಂತ್ರಿಸುವ ಕಾನೂನು(ಅಔಖಿPಂ 2003):

•    ಸೆಕ್ಷನ್ 4: ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಶೇಧ.

•    ಸೆಕ್ಷನ್ 5: ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹೀರಾತುಗಳ ನಿಶೇಧ.

•    ಸೆಕ್ಷನ್ 6: 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು, ಹಾಗೂ ಶಾಲಾ ಕಾಲೇಜುಗಳ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವುದಕ್ಕೆ ನಿಶೇಧ.

•    ಸೆಕ್ಷನ್ 7, 8, 9: ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ಶಾಸನಬದ್ಧ ಎಚ್ಚರಿಕೆ  ಇಲ್ಲದೆ ಮಾರುವುದರ ನಿಶೇಧ.

ಈ ಮೇಲಿನ ಸೆಕ್ಷನ್‍ಗಳಿಗೆ ಪ್ರತ್ಯೇಕ ಪ್ರತ್ಯೇಕವಾದ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

ತಂಬಾಕು ನಿಯಂತ್ರಣಕ್ಕಾಗಿ ಕರ್ನಾಟಕ ರಾಜ್ಯ ಸರಕಾರದ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಅಸ್ತಿತ್ವದಲ್ಲಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳು, ಕಲ್ಯಾಣ ಅಧಿಕಾರಿಗಳು, ಜಿಲ್ಲಾ ವಿಚಕ್ಷಣಾ ಅಧಿಕಾರಿಗಳು ಸಭೆಯನ್ನು ನಡೆಸಿ ತಂಬಾಕು ಸೇವನೆಯನ್ನು ತಡೆಗಟ್ಟುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದುದರಿಂದ ನಾವೆಲ್ಲರೂ ಧೂಮಪಾನಮುಕ್ತ ವ್ಯಕ್ತಿಗಳಾಗಿ ತಂಬಾಕು ರಹಿತ ಜೀವನ ನಡೆಸೋಣ. ಆರೋಗ್ಯವಂತರಾಗಿ ಬಾಳೋಣ.

- Article by 

ವಿವೇಕ್ ವಿ. ಪಾೈಸ್ 

ನಿರ್ದೇಶಕರು 

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರ, ಉಜಿರೆ.