ಉಡುಪಿಯ ಮಿಷನ್ ಕಾಂಪೌಂಡ್ ಅಟೋ ಚಾಲಕರು ಉಡುಪಿಯ ಕ್ರಿಶ್ಚಿಯನ್ ಪದವಿ ಪೂರ್ವಕಾಲೇಜಿಗೆ 15000/-ರೂಪಾಯಿಗಳ ದೇಣಿಗೆಯನ್ನು ನೀಡುವುದರ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸಲು ಕೈಜೋಡಿಸಿದ್ದಾರೆ.

ಕಾಲೇಜಿನ ಪ್ರಾಂಶುಪಾಲರಾದ ಶ್ವೇತಾ ಶ್ರೀನಿವಾಸ್ ಇವರು ಮಾತನಾಡಿ "ಕರ್ಮಯೋಗಿಗಳ ಈ ಸಹಾಯವು ತುಂಬಾ ವಿಶೇಷ ಮತ್ತು ಪ್ರೇರಣಾದಾಯಕವಾಗಿದೆ. ಹಲವು ವರ್ಷಗಳಿಂದ ಇವರು ನಮ್ಮ ಕಾಲೇಜಿಗೆ ನೀಡುತ್ತಿರುವ ಬೆಂಬಲವು ನಮಗೆ ಸದಾ ಒಂದು ಕುಟುಂಬದ ಆಧಾರವಾಗಿ ಕಾಣಿಸುತ್ತಿದೆ. ಈ ನಿಷ್ಠೆ, ಪ್ರೀತಿ ಹಾಗೂ ನಿಸ್ವಾರ್ಥ ಸೇವೆಗೆ ನಾವು ಎಷ್ಟು ಧನ್ಯವಾದ ತಿಳಿಸಿದರೂ ಸಾಲದು.ಇದು ಕೇವಲ ಹಣದ ಸಹಾಯವಲ್ಲ; ಇದು ಒಂದು ಸಂಬಂಧದ ಬಲ, ಒಗ್ಗಟ್ಟಿನ ರೂಪ. ನಿಮ್ಮಿಂದ ಬಂದ ಈ ಪ್ರೀತಿಯ ಸ್ಪರ್ಶದಿಂದ ಕಾಲೇಜು ಕುಟುಂಬವು ಮತ್ತಷ್ಟು ಶಕ್ತಿಶಾಲಿಯಾಗಿ ಮುಂದೆ ಸಾಗಲಿದೆ. ನಿಮ್ಮ ಉದಾರ ಮನಸ್ಸಿಗೆ ತಲೆಬಾಗುತ್ತಾ, ನುಡಿಗಳಲ್ಲಿ ಹೇಳಲಾಗದಷ್ಟು ಕೃತಜ್ಞತೆಯೊಂದಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದು ಹೇಳಿದರು.

ಈ ಸಮಯದಲ್ಲಿ ಕಾಲೇಜಿನ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂಧಿಗಳು ಹಾಗೂ ಅಟೋ ಚಾಲಕರಾದ ಕೃಷ್ಣ, ಉದಯ್ ಕುಮಾರ್, ರಾಜೇಶ್,ಶಾನ್ ನವಾಜ್, ಸುಧಾಕರ್ ಶೆಣೈ, ಪ್ರವೀಣ್ ಕರ್ಕಡ, ರಂಜಿತ್ ಮುಂತಾದವರು ಉಪಸ್ಥಿತರಿದ್ದರು.