ಬಂಟ್ವಾಳ: ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಗರಿಗಳ ಭಾನುವಾರವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು. ಈದರೊಂದಿಗೆ ಪವಿತ್ರ ವಾರಕ್ಕೆ ಅತ್ಯಂತ ಭಕ್ತಿ ಪೂರ್ವಕವಾಗಿ ಆರಂಭ ನೀಡಲಾಯಿತು.
ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ನ ಮೈದಾನದಲ್ಲಿ ಆರಂಭಗೊಂಡ ಪ್ರಾರ್ಥನಾ ವಿದಿ ಹಾಗೂ ಮೆರವಣಿಗೆಯಲ್ಲಿ ಗರಿಗಳೊಂದಿಗೆ ನೂರಾರು ಭಕ್ತಾದಿಗಳು, ಮಕ್ಕಳು ಭಕ್ತಿಯಿಂದ ಪಾಲ್ಗೊಂಡರು.
ಪ್ರಧಾನ ಧರ್ಮಗುರುಗಳಾಗಿ ಮಿಜಾರು ಪಾಲೊಟೈನ್ ಸಮ್ಮೇಳನದ ನಿರ್ದೇಶಕರಾದ ವಂದನೀಯ ಸ್ವಾಮಿ ಜೋನ್ ಪಿರೇರಾ ದೇವರ ವಾಕ್ಯದ ಮೇರೆಗೆ ಪ್ರವಚನ ನೀಡಿದರು ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ ಪ್ರಾರ್ಥನಾ ವಿಧಿ ಹಾಗೂ ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ಮುಖ್ಯೋಪಾದ್ಯಾಯರಾದ ವಂ ಜೇಸನ್ ಮೊನಿಸ್ ರವರು ಪವಿತ್ರ ಬಲಿ ಪೂಜೆಯನ್ನು ಭಕ್ತಾದಿಗಳೊಂದಿಗೆ ಅರ್ಪಿಸಿದರು. ತಪಸ್ಸುಕಾಲದಲ್ಲಿ ಅತ್ಮ ನವೀಕರಣಗೊಳಿಸಲು 3 ದಿನಗಳ ದ್ಯಾನಕೂಟವನ್ನು ಉಡುಪಿ ಧರ್ಮ ಪ್ರಾಂತ್ಯದ ವಂದನಿಯ ಸ್ವಾಮಿ ಸಿರಿಲ್ ಲೋಬೊರವರು ನಡೆಸಿಕೊಟ್ಟರು