ಕಾರ್ಕಳ, ಅತ್ತೂರು: ಸಂತ ಲಾರೆನ್ಸ್ ಬಾಸಿಲಿಕದಲ್ಲಿ ಇಂದು ಏಪ್ರಿಲ್ 13 ರಂದು ಗರಿಗಳ ಭಾನುವಾರವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಪ್ರಧಾನ ಗುರುಗಳಾಗಿ  ಸಹಾಯಕ ಧರ್ಮಗುರುಗಾಳಾದಾ  ವಂದನಿಯ. ಲ್ಯಾರಿ ಪಿಂಟೋ ನೆರವೇರಿಸಿದರು. ಗರಿಗಳ ಆಶೀರ್ವಾದ ಕಾರ್ಯಕ್ರಮ ಆತೊರ್‌ನಲ್ಲಿರುವ ಸಂತಾ ಲಾರೆನ್ಸ್ ಕಾನ್ವೆಂಟ್‌ನಲ್ಲಿ ಜರುಗಿತು.

ಅಶೀರ್ವಾದದ ಬಳಿಕ ಭಕ್ತರು ಗರಿಗಳನ್ನು ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿ, ಸಂತ ಲಾರೆನ್ಸ್ ಬಾಸಿಲಿಕಕ್ಕೆ ಸಾಗಿದರು. ಈ ಮೆರವಣಿಗೆಯು ಯೇಸು ಕ್ರಿಸ್ತನು ಯೆರುಶಲೇಮಿಗೆ ದ್ವಿತೀಯ ಪ್ರವೇಶ ಮಾಡಿದ ಅನುಭವವನ್ನು ಪುನರುಜ್ಜೀವನಗೊಳಿಸುವ ರೀತಿಯಲ್ಲಿ ನಡೆಯಿತು. ಭಕ್ತಿಯಿಂದ ಈ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಯೇಸುವಿನ ಸ್ಮರಣೆಯನ್ನು ಮಾಡಿದರು.

ದಿವ್ಯ ಬಲಿ ಪೂಜೆಯ ವೇಳೆ  ಸಹಾಯಜಾಕರಾದ  ವಲೇಶ್ ಆರನ್ಹ ಅವರು ಧಾರ್ಮಿಕ ಉಪದೇಶ ನೀಡಿದರು. "ನಮ್ಮ ಹೃದಯದಲ್ಲಿ ಯೇಸುವನ್ನು ಒಯ್ಯುವುದು ಮತ್ತು ನಮ್ಮ ಜೀವನದಲ್ಲಿ ಅವರಿಗಾಗಿ ಸಾಕ್ಷಿಗಳಾಗಬೇಕು ಎಂಬ ಸಂದೇಶವನ್ನು  ನೀಡಿದರು.

ರೆಕ್ಟರ್ ಫಾ. ಆಲ್ಬಾನ್ ಡಿಸೋಜಾ ಡಿಸೋಜಾ, ಆಧ್ಯಾತ್ಮಿಕ ಗುರುಗಳಾದ ಫಾ. ರೊಮನ್ ಮಸ್ಕರೇನಸ್ ಸಹಯಾಜಕರಾಗಿ ಈ ಪವಿತ್ರ ಬಲಿ ಸಮರ್ಪಣೆಯಲ್ಲಿ ಪಾಲ್ಗೊಂಡು ಭಕ್ತರೊಂದಿಗೆ ಯೇಸುವಿನ ತ್ಯಾಗದಲ್ಲಿ ಒಂದಾಗಿದರು. ಸಾವಿರಾರು ಜನರ ಭಕ್ತಿಪೂರ್ಣ ಹಾಜರಾತಿ ಈ ಆಚರಣೆಗೆ ವಿಶಿಷ್ಟ ಗೌರವವನ್ನು ನೀಡಿತು.