ಮೂಡುಬಿದಿರೆ: ಪ್ರತಿಷ್ಠಿತ ಬಹು ಆಯಾಮಗಳ ಸಂಶೋಧನೆಯಲ್ಲಿ ತೊಡಗಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡುವೆ ನೂತನ ಒಡಂಬಡಿಕೆಗೆ ಸಹಿ ಹಾಕಲಾಯಿತು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕ ಡಾ. ಶೈಲೇಶ್ ನಾಯಕ್ ಸಹಿ ಮಾಡಿದರು. 

ಎನ್‌ಐಎಎಸ್ ಇಸ್ರೋ ಚೇರ್ ಪ್ರೊಫೆಸರ್ ಡಾ.ಪಿ.ಜಿ.ದಿವಾಕರ್, ಎನ್‌ಐಎಎಸ್ ಆಡಳಿತ ಮುಖ್ಯಸ್ಥರು ಪಿ. ಶ್ರೀನಿವಾಸ್ ಐತಾಳ್ ಸಮ್ಮುಖದಲ್ಲಿ ಬೆಂಗಳೂರಿನ ಎನ್‌ಐಎಎಸ್ ಕೇಂದ್ರ ಕಚೇರಿಯಲ್ಲಿ ಒಡಂಬಡಿಕೆಯ ಒಪ್ಪಂದಕ್ಕೆ ಬರಲಾಯಿತು.

ಐದು ವರ್ಷಗಳ ಈ ಒಪ್ಪಂದವು, ವಿವಿಧ ಆಯಾಮಗಳಲ್ಲಿ ಎರಡು ಸಂಸ್ಥೆಗಳ ನಡುವೆ ಪರಸ್ಪರ ಸಹಕಾರವನ್ನು ಒದಗಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಉತ್ತೇಜಿಸಲು ಎರಡೂ ಸಂಸ್ಥೆಗಳ ನಡುವೆ ಸಹಯೋಗ ಮತ್ತು ತಾಂತ್ರಿಕ ವಿನಿಮಯ ಮಾಡುವುದು, ಎನ್‌ಐಎಎಸ್ ಹಾಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಜಂಟಿಯಾಗಿ ಸಂಶೋಧನೆಯಲ್ಲಿ ತೊಡಗಿಕೊಳ್ಳುವುದು, ಶಿಕ್ಷಣ ಮತ್ತು ಸಂಶೋಧನೆಗೆ ಪೂರಕವಾಗಿ ಮಾಹಿತಿಗಳ ವಿನಿಮಯ ಮಾಡಿ, ಈ ಮೂಲಕ ವಿದ್ಯಾರ್ಥಿಗಳಿಗೂ ಸಮಕಾಲೀನ ತಂತ್ರಜ್ಞಾನಗಳನ್ನು ಪರಿಚಯಿಸಿ, ಸಂಶೋಧನೆಯಲ್ಲಿ ಆಸಕ್ತಿ ಬೆಳೆಸುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ.

ಆಳ್ವಾಸ್ ಇಂಜಿನಿಯರಿAಗ್ ಕಾಲೇಜಿನ ಪ್ಲಾನಿಂಗ್ ಡೀನ್ ಡಾ. ದತ್ತಾತ್ರೇಯ, ನಿತಿನ್ ಕೆ. ಆರ್ ಉಪಸ್ಥಿತರಿದ್ದರು.