ವರದಿ ಫೋಟೋ: ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಶಿಕ್ಷಕರ ದಿನಾಚರಣೆ ಸಮಿತಿ, ಬೆಂಗಳೂರು ಶಿಕ್ಷಕರ ಕಲ್ಯಾಣ ನಿಧಿ ಯ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಕನ್ನಡ ಭವನದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮುಲ್ಕಿ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರು- ಮಕ್ಕಳ ವೈವಿಧ್ಯಮಯ, ವಿಭಿನ್ನ ಸಾಮರ್ಥ್ಯದ ಮಕ್ಕಳನ್ನು ನಿರ್ವಹಿಸುವ ಶಿಕ್ಷಕರ ಪಾತ್ರ ಅನನ್ಯ ಮತ್ತು ಅತ್ಯಂತ ಶ್ರೇಷ್ಠವಾದುದು. ನಮ್ಮ ಹೊಟ್ಟೆಗೆ ಹಿಟ್ಟು, ಉಡಲು ಬಟ್ಟೆ ಇಲ್ಲದಾಗ ಎಲ್ಲವನ್ನು ನೀಡಿದ ಪ್ರಾಥಮಿಕ ಶಿಕ್ಷಕರನ್ನು ಸದಾ ಸ್ಮರಿಸಿಕೊಳ್ಳುತ್ತೇನೆ. ಸರ್ಕಾರದ ಶಿಕ್ಷಣ ಇಲಾಖೆಯ ಚರ್ಚೆಯಲ್ಲಿ ಮೂಲಭೂತ ಸೌಕರ್ಯ, ಸೌಲಭ್ಯವನ್ನು ನೀಡಿ ತದನಂತರವೇ ಪ್ರತಿಭಾ ಕಾರಂಜಿ, ಕ್ರೀಡಾ ಕೂಟವನ್ನು ಏರ್ಪಡಿಸ ಬೇಕೆಂದು ತಿಳಿಸಿದ್ದೇನೆ ಎಂದರು.

ದೇಶಕ್ಕಾಗಿ ದುಡಿಯುವ ವರನ್ನು ನಿರ್ಮಿಸುವ ಶಿಕ್ಷಕರನ್ನು ಸದಾ ಸ್ಮರಿಸಿ, ತಲೆಬಾಗಲೇಬೇಕು. ಏಕೆಂದರೆ ಮಕ್ಕಳನ್ನು ಸಮಾಜ ಮುಖಿಯಾಗಿ ಬೆಳಗಿಸುವವರು ಅವರು ಎಂದು ಕೆ.ಎಂ.ಎಫ್. ಅಧ್ಯಕ್ಷ ,ಜಿ.ಪಂ.ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ನುಡಿದರು.

ಬಂಟ್ವಾಳದ ಅಧ್ಯಾಪಕರು ವಿಠಲ್ ನಾಯಕ್ ದಿಕ್ಸೂಚಿ ಭಾಷಣ ಮಾಡಿದರು.ವೇದಿಕೆಯಲ್ಲಿ ತಾಲೂಕು ಪಂಚಾಯತ್ ಆಡಳಿತ ಅಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಬಿ., ತಾಲೂಕು ತಹಸೀಲ್ದಾರ್ ಪ್ರದೀಪ್ ಕುರುಡೇಕರ್ ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೆಚ್.ಎಸ್., ಉದ್ಯಮಿ-ಸಮಿತಿಯ ಖಜಾಂಚಿ ಶ್ರೀಪತಿ ಭಟ್ ,ದೈ.ಶಿ.ಪರಿವೀಕ್ಷನಾಧಿಕಾರಿ ನಿತ್ಯಾನಂದ ಶೆಟ್ಟಿ,,ಬಿ.ಆರ್.ಸಿ.ಯ ಸೌಮ್ಯ, ಸಂಘಗಳ ಪದಾಧಿಕಾರಿಗಳಾದ ನಾಗೇಶ್ ಎಂ, ರಾಮಕೃಷ್ಣ ಶಿರೂರು, ಶಿವಾನಂದ ಕಾಯ್ಕಿಣಿ, ಶಶಿಕಾಂತ ಜೈನ್, ನವೀನ್ ಪುತ್ರನ್, ಹಾಜರಿದ್ದರು.

ಮೂಡುಬಿದಿರೆ ತಾಲೂಕಿನ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಮು.ಶಿ. ರಾಜ ಶ್ರೀ ಸ್ಪರ್ಧೆ ವಿಜೇತರ ಪಟ್ಟಿಯನ್ನು ನಾಗರತ್ನ ಶಿರೂರು ಓದಿದರು. ವಿರೂಪಾಕ್ಷಪ್ಪ ಸ್ವಾಗತಿಸಿದರು. ನಿತೇಶ್ ಕುಮಾರ್, ಮೀರಾ ಡಾಯಸ್ ಕಾರ್ಯಕ್ರಮ ನಿರ್ವಹಿಸಿದರು.ಶ್ರೀಪತಿ ಭಟ್ ವಂದಿಸಿದರು.