ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಟೀಚರ್ಸ್ ಬ್ಯಾಂಕಿನಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಸಂಬಂಧ ಕಾರ್ಯಕ್ರಮ ನಡೆಯಿತು. ಎ ಜಿ ಸೋನ್ಸ್ ಐ ಟಿ ಐ ನಿವೃತ್ತ ಪ್ರಾಂಶುಪಾಲ ಜಯರಾಮ ಶೆಟ್ಟಿಗಾರ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಶಿಕ್ಷಕರಾದ ಜಯರಾಮ ಶೆಟ್ಟಿಗಾರ ಹಾಗೂ ರಾಯಿ ರಾಜಕುಮಾರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಶಾಲಾ ಶಿಕ್ಷಕ ಮಹಾವೀರ ಎಂ, ಸುನೀತಾ ತೆರೇಸಾ ಪಿಂಟೋ, ಅಲ್ವಿರಾ ರೇಷ್ಮಾ, ಬೆಂಕಿನ ಶಾಖಾಧಿಕಾರಿ ಸಂಧ್ಯಾ, ಸೌಮ್ಯ, ಪ್ರಶಾಂತ್ ಹಾಜರಿದ್ದರು.