ವರದಿ: ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಪೊನ್ನೆಚಾರಿ ಚರ್ಚ್ ಹಿಂದಿನ ಪ್ರದೇಶದಲ್ಲಿ ಸಾಕಷ್ಟು ಶೇಖರವಾಗಿದ್ದ ಕೊಳಚೆಯನ್ನು ಸಂಪೂರ್ಣವಾಗಿ ಪುರಸಭಾ ಸ್ವಚ್ಛತಾ ಸಿಬ್ಬಂದಿಗಳು ಕಳೆದ ಎರಡು ತಿಂಗಳ ಹಿಂದೆ ಸ್ವಚ್ಛ ಗೊಳಿಸಿದರು. ಆದರೆ ಇದೀಗ ಮತ್ತೆ ಪುನಃ ಅದೇ ರಾಜನ್ ಸ್ವೀಟ್ ನವರ ಸಿಬ್ಬಂದಿಗಳು ನೆಲೆಸಿರುವ ಪ್ರದೇಶದಿಂದ ಅತ್ಯಂತ ದುರ್ವಾಸನೆ ಭರಿತ ಕೊಳಚೆ ನೀರು ಹರಿದು ಬರುತ್ತಿದೆ. 

ಈ ಬಗ್ಗೆ ಸ್ಥಳೀಯರು ಪುರಸಭಾ ಅಧಿಕಾರಿಗಳಿಗೆ ತಿಳಿಸಿದರೂ ಕಾರ್ಯ ನಿರ್ವಹಿಸಿಲ್ಲ ಎಂದು ದೂರಿದ್ದಾರೆ. ಅಲ್ಲದೆ ಆಯ್ಕೆಯಾದ ಸ್ಥಳೀಯ ಪುರಸಭಾ ಸದಸ್ಯರು ಕೂಡ ಫೋನ್ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದ್ದಾರೆ. 

ಈ ಹಿಂದಿನ ಸಂದರ್ಭದಲ್ಲಿ ಕೊಳಚೆ ನಿರ್ಮೂಲನೆಗೆ ಮೊದಲೇ ಸಂಬಂಧ ಪಟ್ಟವರಿಗೆ ನೋಟಿಸ್ ನೀಡಲಾಗಿದೆ ಎಂದು ಪುರಸಭಾ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಿದ್ದರೂ ಈ ರೀತಿಯ ಪರಿಸ್ಥಿತಿ ಪುನರಪಿ ನಿರ್ಮಾಣವಾಗಲು ಕಾರಣಗಳೇನು? ಪುರಸಭಾ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಉತ್ತರಿಸಿ ಯಾರೇ?