ಮುಂಬಯಿ, ಸೆ.11: ಕರ್ನಾಟಕ ಕರಾವಳಿಯ ಮೂಲ್ಕಿ ಅಲ್ಲಿನ ಹೊಟೇಲ್ ಲಲಿತ್ ಮಹಲ್ ಇದರ ಮಾಲೀಕ, ಬಿಲ್ಲವರ ಸೇವಾ ಸಂಘ ಮೂಲ್ಕಿ ಇದರ ಮಾಜಿ ಅಧ್ಯಕ್ಷ ಮೂಲ್ಕಿ ಹರಿಶ್ಚಂದ್ರ ವಿ.ಕೋಟ್ಯಾನ್ (77.) ತೀವ್ರ ಹೃದಯಾಘಾತದಿಂದ ಇಂದಿಲ್ಲಿ ಸಂಜೆ ಮೂಲ್ಕಿ ಅಲ್ಲಿನ ನಂದ ಗೋಕುಲಾ ನಿವಾಸದಲ್ಲಿ ನಿಧನರಾದರು.

ಮೂಲ್ಕಿ ಕಟ್ಟೆದ ಮನೆ ಕಂಬಳ ಕೋಣಗಳ ಪ್ರಸಿದ್ಧಿಗೆ ಹೆಸರಾದ ಇವರು ಲಲಿತ್ ಚಾರಿಟೇಬಲ್ ಟ್ರಸ್ಟ್ ಮೂಲ್ಕಿ ಇದರ ಆಡಳಿತ ಟ್ರಸ್ಟಿ ಆಗಿದ್ದು ಆ ಮೂಲಕ ಗುರು ನಾರಾಯಣ ಇಂಗ್ಲಿಷ್ ಮೀಡಿಯಂ ಶೈಕ್ಷಣಿಕ ಸಂಸ್ಥೆಯನ್ನು ಮುಂದಾಳತ್ವದಲ್ಲಿ  ನಡೆಸುತ್ತಿದ್ದರು.  ಭಾರತ್ ಬ್ಯಾಂಕ್ ನ ಮಾಜಿ ನಿರ್ದೇಶಕ, ಲಲಿತ್ ಹೊಟೇಲ್ ಗೋರೆಗಾಂ (ಮುಂಬಯಿ) ಇದರ ಮಾಲೀಕ ಜಗನ್ನಾಥ ವಿ.ಕೋಟ್ಯಾನ್ ಸೇರಿದಂತೆ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು, ಪತ್ನಿ, ಓರ್ವ ಸುಪುತ್ರ, ಸುಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.