2008ರಲ್ಲಿ 7 ಜನರ ಕೊಲೆ ಮತ್ತು ಕೆಲವರ ಸಾವಿಗೆ ಕಾರಣನಾಗಿದ್ದ ಕಾಟೋ ಅಕಿಹಬರ ಎಂಬವನನ್ನು ಟೋಕಿಯೋದಲ್ಲಿ ಜುಲಾಯಿ 26ರಂದು ನೇಣುಗಂಬಕ್ಕೆ ಏರಿಸಲಾಯಿತು.

ಎಲೆಕ್ಟ್ರಾನಿಕ್ ಮಳಿಗೆ ಸಾಲಿಗೆ ಟ್ರಕ್ ಹಾಯಿಸಿ ಹಾಗೂ ಚಾಕು ಚುಚ್ಚಿ ಈತ ಏಳು ಜನರ ಸಾವಿಗೆ ಕಾರಣನಾಗಿದ್ದ. 

20011ರಲ್ಲಿ‌ ಟೋಕಿಯೋ ಜಿಲ್ಲಾ ಕೋರ್ಟ್ ಈತನಿಗೆ ಮರಣ ದಂಡನೆ ವಿಧಿಸಿತ್ತು.

2015ರಲ್ಲಿ ಸುಪ್ರೀಂ ಕೋರ್ಟ್ ಈತನ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿತ್ತು.

ಎಲ್ಲ ಅರ್ಜಿ ವಜಾ ಬಳಿಕ ನಿನ್ನೆ ಕೊಲೆಗಾರನನ್ನು ನೇಣಿಗೇರಿಸಲಾಯಿತು.