ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮಳೆಯೊಂದಿಗೆ ಬೀಸಿದ ವಿಪರೀತ ಗಾಳಿಯಿಂದಾಗಿ ಮೂಡು ಮಾರ್ನಾಡಿನಲ್ಲಿ ಸ್ನಾನ ಗೃಹ ಕುಸಿದು ಮಹಿಳೆಯ ಕಾಲಿನ ಮೂಳೆಮುರಿತ ಸಂಭವಿಸಿದೆ. ಪಡು ಮಾರ್ನಾಡು ಗ್ರಾಮದ ಮೂಡು ಮಾರ್ನಾಡಿನ ನಾಯ್ಲ ಹೊಸಮನೆಯ ರತ್ನಾಕರ ಪೂಜಾರಿ ಅವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅವರ ಪತ್ನಿ ಸ್ನಾನ ಗೃಹದಲ್ಲಿ ನೀರು ಕಾಯಿಸುತ್ತಿದ್ದಾಗ ಅವರ ಕಾಲಿನ ಮೇಲೆ ಶೀಟ್ ಬಿದ್ದು ಮೂಳೆ ಮುರಿತ ಉಂಟಾಗಿದೆ. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.