ಮಂಗಳೂರು, ಮೇ 11: ಮೀಸಲಾತಿ ಬಿಟ್ಟಾದರೂ ಚುನಾವಣೆ ನಡೆಸಬೇಕು ಎಂದು ಮಧ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ನೀಡಿದ ಆದೇಶಕ್ಕೆ ನಾವು ಎಲ್ಲ ಚುನಾವಣೆಗಳಿಗೂ ತಯಾರಿರುವುದಾಗಿ ಕರ್ನಾಟಕ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
ರಾಜ್ಯದಲ್ಲಿ ಜಿಲ್ಲಾ ಪಂಚಾಯತ ಇರಲಿ ತಾಲೂಕು ಪಂಚಾಯತ ಯಾವುದೇ ಇದ್ದರೂ ನಾವು ಸರ್ವ ರೀತಿಯಿಂದ ನಾವು ತಯಾರಾಗಿದ್ದೇವೆ. ಮೋದಿಯವರ ಸರಕಾರ ಮತ್ತು ಬೊಮ್ಮಾಯಿಯವರ ಸರಕಾರಗಳು ಹಿಂದುಳಿದವರಿಗೆ ಎಲ್ಲ ರೀತಿಯ ನೆರವು ನೀಡಿದೆ. ಈಗ ಪೇಜ್ ಪ್ರಮುಖ ಮಟ್ಟದಿಂದಲೂ ನಮ್ಮ ತಯಾರಿ ಇದೆ ಎಂದು ನಳಿನ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದಿರೆ, ಕಸ್ತೂರಿ ಪಂಜ, ರವಿಶಂಕರ್ ಮಿಜಾರ್ ಮೊದಲಾದವರು ಉಪಸ್ಥಿತರಿದ್ದರು.
ಹಿಂದುಳಿದವರಿಗೆ ನ್ಯಾಯ ಸಲ್ಲಿಸಲು ನಾವು ಬದ್ಧರಾಗಿದ್ದೇವೆ. ಈಗ ಯಾವುದೇ ಆಪರೇಶನ್ ಕಮಲ ನಡೆದಿಲ್ಲ. ಪಕ್ಷದ ನೀತಿ ಮೆಚ್ಚಿದವರು ಪಕ್ಷಕ್ಕೆ ಬರುತ್ತಾರೆ ಎಂದಷ್ಟೇ ಕಟೀಲ್ ಹೇಳಿದರು.