ಪ್ಯಾಲೆಸ್ತೀನ್ ಪಶ್ಚಿಮ ದಂಡೆ ಪ್ರದೇಶದಲ್ಲಿ ನಿರಾಶ್ರಿತರ ಬಗೆಗೆ ವರದಿ ತಯಾರಿಕೆಯಲ್ಲಿ ತೊಡಗಿದ್ದ ಅಲ್ ಜಜೀರಾದ ಹಿರಿಯ ಪತ್ರಕರ್ತೆ ಅಬು ಆಕ್‌ಲೇಹಾರನ್ನು ಇಸ್ರೇಲಿನ ಸ್ನೈಪರ್ ಸೈನಿಕರು ಗುಂಡಿಟ್ಟು ಕೊಂದಿರುವುದಾಗಿ ವರದಿಯಾಗಿದೆ.

ಅಲ್ ಜಜೀರಾ ವಾಹಿನಿಯಲ್ಲದೆ ಅಬು ಅವರು ಪಶ್ಚಿಮ ಏಶಿಯಾದ ಜನಪ್ರಿಯ ಪತ್ರಕರ್ತೆ ಆಗಿದ್ದರು. ಎಎಫ್‌ಪಿ ಫೋಟೋಗ್ರಾಫರ್ ಇದು ಕೊಲೆ ಎಂದು ವರದಿ ಮಾಡಿದ್ದಾರೆ.