ಮಂಗಳೂರು: ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಮಂಗಳೂರಿನ ಶ್ರೀ ಚೈತನ್ಯ ಪದವಿಪೂರ್ವ ಕಾಲೇಜಿನ ಚಿರಾಗ್ ರಾವ್ 720 ರಲ್ಲಿ 685 ಅಗ್ರ ಅಂಕಗಳನ್ನು ಗಳಿಸಿಕೊಂಡಿರುತ್ತಾರೆ. ಅಖಿಲ ಭಾರತ ಮಟ್ಟದಲ್ಲಿ 450 ನೇ Rank,ಕೆಟಗರಿ ಯಲ್ಲಿ 117 ನೇ Rank ನ್ನು ಪಡೆದಿರುತ್ತಾರೆ. 

ಕಾಲೇಜಿನ 5 ವಿದ್ಯಾರ್ಥಿಗಳು 600 ಕಿಂತ ಅಧಿಕ ಅಂಕಗಳನ್ನು ಮತ್ತು 17 ವಿದ್ಯಾರ್ಥಿಗಳು 500 ಕಿಂತ ಅಧಿಕ ಅಂಕಗಳನ್ನು ಗಳಿಸಿರುತ್ತಾರೆ.ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಸಂಸ್ಥೆಯ ಸಹಾಯಕ ವಲಯ ಮುಖ್ಯಸ್ಥರಾಗಿರುವಂತಹ ಶ್ರೀಯುತ ವಂಶಿ ಕೃಷ್ಣ, ಕಾಲೇಜಿನ ಪ್ರಾಂಶುಪಾಲರಾಗಿರುವಂತಹ ಶ್ರೀ ರಾಮಕೃಷ್ಣ ಭೋಗ್ಯಮ್, ಉಪಪ್ರಾಂಶುಪಾಲರಾಗಿರುವಂತಹ ಶ್ರೀಮತಿ ಸಿಂಧೂ ಸೇದು,  ಶಾಲಾ ಪ್ರಾಂಶುಪಾಲರಾಗಿರುವಂತಹ ಶ್ರೀಮತಿ ರೂಪ ಶೆಣೈ ಮತ್ತು ಬೋಧಕ ಭೋದಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.