ಕೇಂದ್ರ ಹಣಕಾಸು ಮಂತ್ರಿಣಿ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಸಾಲಿನ ಬಜೆಟ್ ಮಂಡನೆ ಮಾಡಿದರು ಮತ್ತು ಅತಿ ಉದ್ದದ ಭಾಷಣ ಓದಿದರು.
400 ವೇಗದ ವಂದೇ ಭಾರತ್ ರೈಲುಗಳು, ಕಾವೇರಿ ಪೆನ್ನಾರ್ ನದಿ ಜೋಡಣೆ, 5ಜಿ ತರಂಗಾಂತರ ಹರಾಜು, ಮಾನಸಿಕ ಆರೋಗ್ಯಕ್ಕೆ ಟೆಲಿ ಮೆಂಟಲ್ ಹೆಲ್ತ್, ಡಿಜಿಟಲ್ ಬ್ಯಾಂಕಿಂಗ್, ರೈತರಿಗೆ ಕಿಸಾನ್ ಡ್ರೋನ್, 100 ಕಾರ್ಗೋ ಕಾರಿಡಾರ್ ಮೊದಲಾದ ವಿಷಯಗಳನ್ನು ಬಜೆಟ್‌ನಲ್ಲಿ ಹೇಳಲಾಗಿದೆ.
ಒಳ್ಳೆಯ ದಿನ ದೂರಕ್ಕೆ ದೂಡಿದ ಶೂನ್ಯ ಬಜೆಟ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದರು.
ಜನಸಾಮಾನ್ಯರಿಗೆ ಏನೂ ಇಲ್ಲದ ಬಜೆಟ್ ಎಂದು ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟೀಕಿಸಿದರು.
ಭಾರತ ಎಂಬ ಒಳ್ಳೆಯ ಬಾಳೆಯ ತೋಟಕ್ಕೆ ಕಾಡಾನೆ ನುಗ್ಗಿದಂತಾಗಿದೆ ಈ ಬಜೆಟ್ ಮತ್ತು ಸರಕಾರ ಎಂದಿದ್ದಾರೆ ಸುಬ್ರಹ್ಮಣ್ಯಸ್ವಾಮಿ.