ಹಿಜನ್ ಧರಿಸುವುದು ಧಾರ್ಮಿಕ ಹಕ್ಕು ಮಾತ್ರವಲ್ಲ, ಅದು ಸಾಂವಿಧಾನಿಕ ಹಕ್ಕು, ಅದನ್ನು ತಡೆಯುವ ಅಧಿಕಾರ ಶಾಸಕರಿಗೆ ಇಲ್ಲ ಎಂದು ವಿದ್ಯಾರ್ಥಿನಿ ಅಲಿಯಾ ಅಸದಿ ಟ್ವೀಟ್ ಮಾಡಿದ್ದಲ್ಲದೆ ಆರು ಜನರು ಹಿಜಬ್ ಸಹಿತ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಬಂದರು.
ಎಂಟು ವಿದ್ಯಾರ್ಥಿನಿಯರು ಇದ್ದು ಇಬ್ಬರು ಕೊರೋನಾದಿಂದಾಗಿ ಕಾಲೇಜಿಗೆ ಬಂದಿಲ್ಲ. ಇವರಿಗೆ ನ್ಯಾಯ ಕೊಡಿಸಲು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಶಿಕ್ಷಣ ಸೇವಾ ಸಮಿತಿಯ ಕೆಲವರೇ ಮಾಡಿರುವ ನಿರ್ಣಯವನ್ನು ನಾವು ಒಪ್ಪಿಲ್ಲ ಎಂದು ವಿದ್ಯಾರ್ಥಿನಿಯರು ತಿಳಿಸಿದರು.