ದೈಹಿಕ ಸ್ವಾಯತ್ತತೆ ಎಲ್ಲರ ಹಕ್ಕು ಯಾರನ್ನೂ ಲಸಿಕೆ ತೆಗೆದುಕೊಳ್ಳುವಂತೆ ಒತ್ತಾಯಿಸುವಂತಿಲ್ಲ. ಲಸಿಕೆ ನಿಯಮಾವಳಿ ಭಾರತದಲ್ಲಿ ಅಸಮರ್ಪಕವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಜಸ್ಟಿಸ್‌ಗಳಾದ ಎಲ್. ನಾಗೇಶ್ವರರಾವ್, ಬಿ. ಆರ್. ಗವಾಯಿ ಅವರಿದ್ದ ನ್ಯಾಯ ಪೀಠವು ತೀರ್ಪು ನೀಡಿತು.
ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಲಸಿಕೆ ಪಡೆಯದವರಿಗೆ ಸಾರ್ವಜನಿಕ ಪ್ರವೇಶ ಮೊದಲಾದ ನಿರ್ಬಂಧ ಹೇರಿರುವುದು ನಿರಂಕುಶ ಪ್ರಭುತ್ವವಾಗಿದೆ ಎಂದೂ ನ್ಯಾಯಮೂರ್ತಿಗಳು ಹೇಳಿದರು.