ಇಂದಿಲ್ಲಿ ಕೊಂಕಣಿಯ 65 ರಾಯಭಾರಿಗಳಿದ್ದಾರೆ. ರಜೆಯಲ್ಲಿ ಉನ್ನತ ಶಿಕ್ಷಣದ ತಯಾರಿ ಬಗ್ಗೆ ಚಿಂತಿಸುವ ಇಂದಿನ ದಿನಮಾನದಲ್ಲಿ ಕೊಂಕಣಿ ಭಾಷೆ, ಕಲೆ, ಸಂಸ್ಕೃತಿ ಕಲಿಕೆಗೆ ತಮ್ಮ ಮಕ್ಕಳನ್ನು ಕಳುಹಿಸಿದ ಎಲ್ಲಾ ಪೋಷಕರಿಗೆ ಅಭಿನಂದನೆಗಳು. ಮಕ್ಕಳೇ, ನೀವು ಇಲ್ಲಿ ಕಲಿತುದನ್ನು ಮುಂದುವರಿಸಿ, ಇಂದು ಶಿಕ್ಷಣದ ಜತೆಗೆ ಭಾವನೆಗಳನ್ನು ಗುರುತಿಸುವ, ಗೌರವಿಸುವುದನ್ನು ಕಲಿಯುವ ಅಗತ್ಯವಿದೆ’’ ಎಂದು ಎಂ ಆರ್ ಪಿ ಎಲ್ ಸಂಸ್ಥೆಯ ಕಾರ್ಪೊರೇಟ್ ಕಮ್ಯೂನಿಕೇಶನ್ಸ್ ವಿಭಾಗದ ಜನರಲ್ ಮೆನೆಜರ್ ರುಡಾಲ್ಫ್ ಜೊಯೆರ್ ನೊರೊನ್ಹಾ ಹೇಳಿದರು. ಅವರು ಮಾಂಡ್ ಸೊಭಾಣ್ ಆಯೋಜಿಸಿದ ಹತ್ತು ದಿನಗಳ ವಸತಿ ಶಿಬಿರ ಕಿರ್ಣಾಂ (ಕಿರಣಗಳು) ಇದರ ಸಮಾರೋಪದಲ್ಲಿ 65 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತಾನಾಡುತ್ತಿದ್ದರು.
ವಿತೊರಿ ಕಾರ್ಕಳ ಶಿಬಿರ ಹೇಗೆ ನಡೆಯಿತು ಎಂಬ ಬಗ್ಗೆ ಮಾಹಿತಿ ನೀಡಿದರು. ಅಮಾನ್ ಕ್ರಿಸ್ ದಾಂತಿ ಮತ್ತು ಹೆಜೆಲ್ ಏಂಜಲ್ ಡಿಸೋಜ ಇವರು ಕೊಂಕಣಿ ಅಂಕೆ ಸಂಖ್ಯೆಗಳನ್ನು ಪ್ರಸ್ತುತಪಡಿಸಿದರು. ರಿಯಾ ಮೊಂತೇರೊ, ರಿಶೊನ್ ಸ್ವೀಡ್ ನೊರೊನ್ಹಾ ಮತ್ತು ಮರ್ಲಿನ್ ವೇಗಸ್ ಶಿಬಿರದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅನಿತಾ ಲೋಬೊ ಮತ್ತು ರೊನಿ ಕ್ರಾಸ್ತಾ ಕುಲ್ಶೇಕರ್ ಪೋಷಕರ ಪರವಾಗಿ ಮಾತನಾಡಿದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಯಶಸ್ಸಿಗಾಗಿ ದುಡಿದವರನ್ನು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಗೌರವಿಸಿದರು.
ಇದೇ ವೇಳೆ ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿದ ಮೆಲೊಡಿಯಾ ಕುವೆಲ್ಲೊ ಪೆರ್ಮನ್ನೂರು (ನೃತ್ಯ), ಬ್ಲೆಸಿಟಾ ಫರ್ನಾಂಡಿಸ್ ಹೊನ್ನಾವರ (ಗಾಯನ), ಜೆನಿಶಾ ರೊಡ್ರಿಗಸ್ ಗುರುಪುರ (ನಾಟಕ) ಇವರನ್ನು ತಲಾ 2000/- ನಗದು ನೀಡಿ ಹಾಗೂ ಶ್ರೇಷ್ಟ ಶಿಬಿರಾರ್ಥಿಯಾಗಿ ಆಯ್ಕೆಯಾದ ರಿಶೊನ್ ಸ್ವೀಡ್ ನೊರೊನ್ಹಾ, ಬಜ್ಪೆ ಇವರನ್ನು ರೂ 3000/- ನಗದು ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ರೊನ್ವಿಲ್ ಡಿಸೋಜ ಧನ್ಯವಾದವನ್ನಿತ್ತರು. ವೇದಿಕೆಯಲ್ಲಿ ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಮತ್ತು ಕೋಶಾಧಿಕಾರಿ ಎಲ್ರೊನ್ ರೊಡ್ರಿಗಸ್ ಉಪಸ್ಥಿತರಿದ್ದರು. ರೊಲ್ಫ್ ರಶ್ವಿತ್ ಲೋಬೊ ಮತ್ತು ಎಲ್ರೀಶಾ ರಾಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ನಂತರ ಶಿಬಿರಾರ್ಥಿಗಳು 245 ನೇ ತಿಂಗಳ ವೇದಿಕೆಯಲ್ಲಿ ತಾವು ಕಲಿತ ಗಾಯನ ಹಾಗೂ ನೃತ್ಯ ಪ್ರದರ್ಶಿಸಿದರು. ನಾಟಕ ವಿಭಾಗದಲ್ಲಿ ರೊನಿ ಕ್ರಾಸ್ತಾ ಬರೆದು, ವಿಕಾಸ್ ಲಸ್ರಾದೊ ನಿರ್ದೇಶಿಸಿದ ತ್ಯಾ ಉಪ್ರಾಂತ್ (ಆ ನಂತರ) ಕಿರುನಾಟಕ ಪ್ರದರ್ಶನವಾಯಿತು.