ಮಂಗಳೂರು, ಮೇ 02: ಕನ್ನಡದ ಜನಪ್ರಿಯ ನಟರಾದ ಶಿವರಾಜ್ ಕುಮಾರ್ ಅವರ ಜೊತೆಗೆ ಮೇ 2ರಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಪೋಲೀಸರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಕರ್ನಾಟಕದ ಮೊದಲ ಕುಟುಂಬ ಎಂದರೆ ಅದು ದಿವಂಗತ ರಾಜಕುಮಾರ್ ಅವರ ಕುಟುಂಬ. ನಾನು ಶಿವರಾಜ್ ಕುಮಾರ್ ಅಭಿಮಾನಿ. ಕರ್ನಾಟಕದವರಿಗೆ ನವರಸಗಳ ಪರಿಚಯವಾದುದೇ ರಾಜ್ ಕುಮಾರ್ ಮತ್ತು ಅವರ ಮಕ್ಕಳಿಂದ. ಇನ್ನು ದಿವಂಗತ ಪಾರ್ವತಮ್ಮ ರಾಜ್‍ಕುಮಾರ್ ಅವರು ಲೋಕದಲ್ಲೇ ಅತಿ ಹೆಚ್ಚು ಸೃಜನಾತ್ಮಕ ಚಿತ್ರ ನಿರ್ಮಿಸಿದವರು ಎಂದು ಶಶಿಕುಮಾರ್ ಹೇಳಿದರು.
ಶಿವರಾಜ್ ಕುಮಾರ್ ಮಾತನಾಡಿ ನಟನಾಗಿ, ನಮಗೆ ನೋವು ನೀಡಿ ಪುನೀತ್ ರಾಜ್‍ಕುಮಾರ್ ಹೊರಟು ಹೋದರೂ ಆತ ಮಾತನಾಡದೆ ಮಾನವೀಯತೆಗೆ ಉದಾಹರಣೆಯಾಗಿ ಹೊರಟು ಹೋದರು. ಮಂಗಳೂರು ನನಗೆ ಇಷ್ಟದ ಊರು. ನಾನು ಪೋಲೀಸು ಪಾತ್ರ ಮಾಡಿದ ಎಲ್ಲ ಚಿತ್ರಗಳು ಯಶಸ್ವಿಯಾಗಿವೆ. ತುಳು ಕನ್ನಡ ಎರಡೂ ಜನ ಭಾಷೆಗಳು. ಇನ್ನೊಮ್ಮೆ ಬಂದು ಇನ್ನೂ ಹೆಚ್ಚು ಕಾಲ ನಿಮ್ಮ ಜೊತೆಗೆ ಭಾಗವಹಿಸುವೆ ಎಂದು ಶಿವರಾಜ್ ಕುಮಾರ್ ಹೇಳಿದರು.
ಇನ್ನೊಮ್ಮೆ ತಂಗಿ ಪಾತ್ರದ ಮೂರು ಕತೆಗಳ ಸಬ್ಜೆಕ್ಟ್ ಇದೆ. ಅದಕ್ಕೆ ತಂಗಿ ಹುಡುಕುತ್ತಿದ್ದೇನೆ. ರೌಡಿ ಪಾತ್ರ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ಕುಮಾರ್ ಅವರು ಅವರಿದ್ದರೆ ನಿಮಗೆ ಕೆಲಸ ಎಂದು ಪೋಲೀಸರಿಗೆ ಉತ್ತರಿಸಿದರು. ಪೋಲೀಸು ಪಾತ್ರ ಎಂದು ಹೇಳಬೇಕೆಂದರೆ ಟಗರು ಎರಡು ಬರುವ ಸಂಭವ ಇದೆ. ಇತ್ಯಾದಿ ಚಿತ್ರಗಳ ಬಗೆಗೂ ಅವರು ಸಂಕ್ಷಿಪ್ತವಾಗಿ ಉತ್ತರಿಸಿದರು.