ಮೂಡುಬಿದಿರೆ: ಸ್ಥಳೀಯ ಅಲಂಗಾರಿನಲ್ಲಿ ನಬಾರ್ಡ್ ಪ್ರಾಯೋಜಿತ ರೈತ ಜನ್ಯ ಕೃಷಿ ಉತ್ಪಾದಕರ ಕಂಪನಿ ಹಾಗೂ ಮಂಗಳೂರು ತೋಟಗಾರಿಕಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 75 ಶೇಕಡ ಸಹಾಯಧನದೊಂದಿಗೆ ಜೇನು ಕೃಷಿ ಆಸಕ್ತರಿಗೆ ಅವಕಾಶವಿದೆ. ಜೇನು ಕೃಷಿಯಲ್ಲಿ ಆಸಕ್ತರಿಗೆ ತರಬೇತಿ, ಜೇನು ಪೆಟ್ಟಿಗೆ, ಜೇನು ಕುಟುಂಬ, ಮತ್ತು ಸ್ಟ್ಯಾಂಡ್ ಪಡೆದು ಮಧುವನ ವನ್ನು ಸ್ಥಾಪಿಸಲು ಅವಕಾಶವನ್ನು ನೀಡಲಾಗುವುದು.

ಮೂಡುಬಿದಿರೆ ತಾಲೂಕಿನ ರೈತರು ಜುಲಾಯಿ 09ಕ್ಕೆ ಮೊದಲು ಅಲಂಗಾರಿನಲ್ಲಿರುವ ಯಶ್ವಿ ಪ್ಯಾರಡೈಸ್ ಕಟ್ಟಡದ ನೆಲ ಅಂತಸ್ತಿನಲ್ಲಿ ಕಾರ್ಯಾಚರಿಸುತ್ತಿರುವ ರೈತ ಜನ್ಯ ಕೃಷಿ ಉತ್ಪಾದಕರ ಕಂಪನಿಯನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆಯಬಹುದಾಗಿದೆ. ಅರ್ಜಿಯೊಂದಿಗೆ ಆಸಕ್ತರು ಒಂದು ವೇಳೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಾದರೆ ಮಾತ್ರ ಜಾತಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಉಳಿದಂತೆ ಆಧಾರ್ ಕಾರ್ಡ್, ಪಡಿತರ ಚೀಟಿ ಅಥವಾ ವಾಸ ದೃಢೀಕರಣ ಪತ್ರ, ಪಹಣಿ ಪತ್ರ, ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಗಳನ್ನು ನೀಡಬೇಕಾಗುತ್ತದೆ. ಆಯ್ಕೆಯಾದವರು ಮೊದಲಾಗಿ ರೂ.4,500 ಕಟ್ಟಬೇಕಾಗುತ್ತದೆ. ತರುವಾಯದಲ್ಲಿ ಸಹಾಯಧನ ರೂ 3375ನ್ನು ಹಿಂತಿರುಗಿಸಲಾಗುವುದು ಇಂದು ಪ್ರಕಟಣೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತೋಟಗಾರಿಕಾ ಇಲಾಖೆಯವರು ತಿಳಿಸಿರುತ್ತಾರೆ. ಅಸಕ್ತರು ಮೊಬೈಲ್ ಸಂಖ್ಯೆ 9880869464/6366207155 ಗೆ ಸಂಪರ್ಕಿಸಿ ವಿವರಣೆ ಪಡೆಯಬಹುದಾಗಿದೆ.