ಆಂಧ್ರ ಪ್ರದೇಶ ಸರಕಾರವು ಕೋನಸೀಮ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಗೆ ಬಿ. ಆರ್. ಅಂಬೇಡ್ಕರ್ ಕೋನಸೀಮ ಎಂದು ಹೆಸರು ಇಡುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಾರಿಗೆ ಸಚಿವ ಪಿ. ವಿಶ್ವರೂಪು ಅವರ ಮನೆಗೆ ಬೆಂಕಿ ಹಾಕಲಾಗಿದೆ. 

ಪೋಲೀಸರ ಮೇಲೆ ಕಲ್ಲೆಸೆತ, ಸಾರ್ವಜನಿಕ ಆಸ್ತಿಯ ಹಾನಿ ಎಂದು ಅಮಲಾಪುರಂನಲ್ಲಿ ಹಿಂಸೆ ಭುಗಿಲೆದ್ದಿದೆ. ಪ್ರತಿಪಕ್ಷಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವೆ ತಾನೇಟಿ ವನಿತಾ ಹೇಳಿದ್ದಾರೆ.