ನಾನಾ ಶಿಕ್ಷಣ ಸಂಸ್ಥೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ಪದವಿಪೂರ್ವ ಕಾಲೇಜುಗಳನ್ನು ಸ್ಥಾಪಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. 2022- 23ರ ಶೈಕ್ಷಣಿಕ ವರುಷದಲ್ಲೇ ಅನುಮತಿಗಾಗಿ ಕೋರಿವೆ.

ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಮಕ್ಕಳು ಉತ್ತೀರ್ಣರಾಗಿರುವುದರಿಂದ ಪಿಯುಸಿ ಸೇರ್ಪಡೆಗೆ ಹೆಚ್ಚು ಒತ್ತಡ ಇದೆ. ಸದ್ಯ ದಕ್ಷಿಣ ಕನ್ನಡದಲ್ಲಿ 197 ಮತ್ತು ಉಡುಪಿ ಜಿಲ್ಲೆಯಲ್ಲಿ 105 ಪದವಿಪೂರ್ವ ಕಾಲೇಜುಗಳು ಇವೆ. ಈಗ ಕಾಪು, ಕಟಪಾಡಿ, ಬಜಪೆ, ಸೂರಿಂಜೆ, ಕಿನ್ನಿಗೋಳಿ ಮೊದಲಾದ ಕಡೆಗಳಿಂದ ಪ್ರಸ್ತಾವನೆ ಬಂದಿವೆ.